Doddaballapur: ಗೌರಿ ಬಿದನೂರು 4 ಮಹಿಳೆಯರ ಸಾವಿಗೆ ಕಾರಣ ಸೊಳ್ಳೆಗಳು ! ಅರೆ ಏನಿದು ಶಾಕಿಂಗ್ ನ್ಯೂಸ್ ?

Doddaballapur news 4 Of Family From West Bengal Found Dead At Poultry Farm

Doddaballapur: ಎಂದಿನಂತೆ ಉಂಡು ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಬೆಳಿಗ್ಗೆ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ದೊಡ್ಡಬಳ್ಳಾಪುರ(Doddaballapur) ತಾಲೂಕಿನ ಹೊಲೆಯರಹಳ್ಳಿಯಲ್ಲಿ ವರದಿಯಾಗಿತ್ತು. ಇದೀಗ ಕೋಳಿ ಫಾರ್ಮ್ ನಲ್ಲಿ ಒಂದೇ ಕುಟುಂಬದ ನಾಲ್ಕು ಮಹಿಳೆಯರು ತೀರಿಕೊಂಡ ಘಟನೆಗೆ ಒಂದೊಂದಾಗಿ ಕಾರಣಗಳು ಹೊರಬರುತ್ತಿವೆ. ವಿಷಾನಿಲ ಸೇವಿಸಿ ಉಸಿರುಗಟ್ಟಿ ಆ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಿನ್ನೆ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದವರು ಅವರೆಲ್ಲರೂ ರಾತ್ರಿ ಉಂಡು ಮಲಗಿದ್ದರು. ಬೆಳಿಗ್ಗೆ ಅವರ್ಯಾರು ಏಳಲೇ ಇಲ್ಲ. ಒಂದೇ ಕುಟುಂಬದ ನಾಲ್ವರು ಮರಣಿಸಿದ ಸುದ್ದಿ ಕೇಳಿದ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಮಲಗಿದ್ದಲ್ಲಿಯೇ ಸತ್ತವರಲ್ಲಿ ಎಲ್ಲರೂ ಮಹಿಳೆಯರು ಎನ್ನುವುದು ವಿಶೇಷ. ಕಾಲೆ ಸರೇರಾ ಎಂಬ 60 ವರ್ಷದ ಹೆಂಗಸು, ಲಕ್ಷ್ಮಿ ಸರೆರಾ ಎನ್ನುವ 50 ವರ್ಷದ, ಉಷಾ ಸರೇರಾ ಎಂಬ 40 ವರ್ಷದ ಮತ್ತು ಪೋಲ್ ಸರೇರಾ ಎಂಬ 16 ವರ್ಷದ ಮಹಿಳೆಯರು ಮೃತ ದುರ್ದೈವಿಗಳು.

ಇದೀಗ ಮಹಿಳೆಯರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೋಳಿ ಫಾರ್ಮನ ಪಕ್ಕದಲ್ಲಿ ಇದ್ದ ಶೆಡ್ಡಿನಲ್ಲಿ ಅವರು ವಾಸಿಸುತ್ತಿದ್ದರು. ಕೇವಲ 10 ದಿನಗಳ ಹಿಂದೆ ಮೋಹನ್ ಎನ್ನುವವರ ಕೋಳಿ ಫಾರ್ಮ್ ಗೆ ಕೆಲಸಕ್ಕೆಂದು ಅವರು ನೇಪಾಳದಿಂದ ಬಂದಿದ್ದರು. ಅದು ಕೋಳಿ ಫಾರ್ಮ ನ ಪಕ್ಕದ ಶೆಡ್ ಆದುದರಿಂದ ಅಲ್ಲಿ ವಿಪರೀತ ಸೊಳ್ಳೆ ಕಾಟವಿತ್ತು. ಅಲ್ಲದೆ ಅಲ್ಲಿ ಸಣ್ಣ ಮಟ್ಟದ ಚಳಿ ಕೂಡ ಇತ್ತು. ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಅವರು ಕಿಟಕಿ ಬಾಗಿಲು ಭದ್ರಪಡಿಸಿ ಶೆಡ್ಡಿನ ಒಂದು ಮೂಲೆಯಲ್ಲಿ ಬೆಂಕಿ ಹಾಕಿ, ಸಣ್ಣ ಉರಿ ಇಟ್ಟಿದ್ದರು. ಅಲ್ಲದೆ ಸೊಳ್ಳೆ ಬತ್ತಿ ಕೂಡ ಹತ್ತಿಸಿದ್ದರು. ಇದೀಗ ಇದುವೇ ಸಾವಿಗೆ ಮೂಲವಾಗಿದೆ. ಮುಚ್ಚಿದ ರೂಮಿನಲ್ಲಿ ಉರಿ ಹಚ್ಚಿದ ಕಾರಣದಿಂದ ರೂಮಿನ ಒಳಗೆ ಆಮ್ಲಜನಕದ ಕೊರತೆ ಉಂಟಾಗಿದೆ. ಅಲ್ಲದೆ ರೂಮಿನಲ್ಲಿ ಕಾರ್ಬನ್ ಮೋನಾಕ್ಸೈಡ್ ಶೇಖರಗೊಂಡಿದೆ.

ಕಾರ್ಬನ್ ಮಾನಾಕ್ಸೈಡ್ ಬಣ್ಣ ವಾಸನೆ ಇಲ್ಲದ ಗ್ಯಾಸ್ ಆಗಿದ್ದು, ಮನೆಯಲ್ಲಿ ಒಂದು ಪ್ರಮಾಣಕ್ಕಿಂತ ಹೆಚ್ಚು ಸಾಂದ್ರತೆಯ ಕಾರ್ಬನ್ ಮೋನಾಕ್ಸೈಡ್ ಶೇಖರ ಆದ ಕೂಡಲೇ ತಕ್ಷಣ ಸ್ಮೃತಿ ತಪ್ಪುತ್ತದೆ. ಹಾಗೆ ನಿದ್ದೆಯಲ್ಲಿ ಇರುವಾಗ ಕಾರ್ಬನ್ ಮೋನಾಕ್ಸೈಡ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಸಹಿತ ಹೊಗೆ ರೂಮಿನೊಳಗೆ ತುಂಬಿಕೊಂಡು ಈ ಮಹಿಳೆಯರು ಸಾವು ಕಂಡಿರಬಹುದು ಎನ್ನಲಾಗಿದೆ. ವೈದ್ಯಕೀಯ ರಿಪೋರ್ಟುಗಳು ಬಂದ ನಂತರ, ಕಾರಣಗಳು ಖಚಿತವಾಗಲಿವೆ.

 

Leave A Reply

Your email address will not be published.