Sonia Gandhi: ಪೂರ್ತಿ ಫ್ರೀ ಕರೆಂಟ್, ಸ್ತ್ರೀಯರಿಗೆ ತಿಂಗಳಿಗೆ 2,500 ರೂ., 500 ರೂ.ಗೆ ಗ್ಯಾಸ್ ಸಿಲಿಂಡರ್ – ಕಾಂಗ್ರೆಸ್’ನಿಂದ ಹೊಸ ಘೋಷಣೆ, ಜನವರಿಯಿಂದ ಜಾರಿ !

Political news Sonia Gandhi Announces Six-Point Scheme Ahead Of Telangana Polls

Sonia Gandhi : ಕಾಂಗ್ರೆಸ್ ಪಕ್ಷದಿಂದ ಮತ್ತೊಂದು ಬೃಹತ್ ಘೋಷಣೆ ಮಾಡಲಾಗಿದೆ. ತೆಲಂಗಾಣದಲ್ಲಿ ಈ ಬಾರಿ ಅಧಿಕಾರಕ್ಕೆ ಬರಬೇಕು ಶಪಥ ಮಾಡಿ ಕೂತಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕದ ಮಾದರಿಯಲ್ಲಿಯೇ ಗ್ಯಾರಂಟಿ ಬ್ರಹ್ಮಾಸ್ಥ ಪ್ರಯೋಗಿಸಿದೆ.

ಕಾಂಗ್ರೆಸ್ ಸರ್ಕಾರವನ್ನು ತೆಲಂಗಾಣದಲ್ಲಿ ತರುವುದು ನನ್ನ ಕನಸು ಎಂದು ಸೋನಿಯಾಗಾಂಧಿ( Sonia Gandhi ) ಘೋಷಿಸಿದ್ದಾರೆ. ಜೊತೆಗೆ ಆರೋಗ್ಯವನ್ನು ಅವರು ಅಲ್ಲಿನ ತೆಲುಗು ನೀಡಿದ್ದಾರೆ. ಹಾಗಾದರೆ ಏನು ಗ್ಯಾರಂಟಿಗಳು ಎಂದು ನೋಡೋಣ. ಮಹಾಲಕ್ಷ್ಮಿ ಹೆಸರಿನ ಅಲ್ಲಿ ಮಹಿಳೆಯರಿಗೆ ತಿಂಗಳಿಗೆ ಎರಡು ವರೆ ಸಾವಿರ ರೂಪಾಯಿ ಹಾಗೂ ಐನೂರು ರೂಪಾಯಿಗೆ ಗ್ಯಾಸ್ ಸಿಲಿಂಡರ್ ಮಹಿಳೆಯರಿಗೆ ಫ್ರೀ ಬಸ್ಸಿನಲ್ಲಿ ಓಡಾಟ ಗ್ಯಾರೆಂಟಿಗಳಲ್ಲಿರುವ ಪ್ರಮುಖ ವಿಷಯಗಳು. ಅದಲ್ಲದೆ ಕ್ವಿಂಟಾಲ್ ಭತ್ತಕ್ಕೆ 500 ರೂಪಾಯಿ, ಬೋನಸ್ ಉಡುಗೊರೆ, ಪ್ರತಿ ಮನೆಗೂ 200 ಯೂನಿಟ್ ಕರೆಂಟ್ ಫ್ರೀ, ಮನೆ ಇಲ್ಲದವರಿಗೆ ಇಂದಿರಮ್ಮ ಗ್ರಹ ಯೋಜನೆ ಸೇರಿ ಇನ್ನೂ ಹಲವು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.

ತೆಲಂಗಾಣದ ತುಕ್ಕುಗೂಡದ ‘ ವಿಜಯಭೇರಿ’ ಸಾರ್ವಜನಿಕ ಸಭೆಯಲ್ಲಿ ಭಾನುವಾರ ಸೋನಿಯಾ ಗಾಂಧಿವರು ಈ 6 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣ ಈ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸುವುದಾಗಿ ಅವರು ವಾಗ್ದಾನ ನೀಡಿದ್ದಾರೆ.

ತೆಲಂಗಾಣ ವಿಧಾನಸಭೆಯ ಒಟ್ಟು 119 ಸ್ಥಾನಗಳಿಗೆ ಇನ್ನೂ ಮೂರು ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಅದೇ ಬ್ರಹ್ಮಾಸ್ತ್ರ ಉಪಯೋಗಿಸಲು ತೆಲಂಗಾಣದಲ್ಲಿ ರೆಡಿಯಾಗಿದೆ. ಹಾಗಾಗಿ ಆಕರ್ಷಕ ಗ್ಯಾರಂಟಿ ಸ್ಕೀಮ್ ನಡೆದಿದ್ದು, ನಿನ್ನೆ ತೆಲಂಗಾಣದಲ್ಲಿ ಜನಸಾಮಾನ್ಯರಿಗೆ ವಿವರಿಸಿ ಹೇಳಲಾಗಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಯಲ್ಲೋ ಅಲರ್ಟ್, ಮೀನುಗಾರರಿಗೆ ವಾರ್ನಿಂಗ್; ಎಲ್ಲೆಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆ ?!

Leave A Reply

Your email address will not be published.