Dhruva Sarja: ಧ್ರುವ ಸರ್ಜಾ ಪತ್ನಿ ಹೆರಿಗೆ, ಮಗು ಗಂಡಾ ಹೆಣ್ಣಾ ?

Sandalwood news actor dhruva sarja second child dhruva sarja wife prerana delivery today

Dhruva Sarja: ಕನ್ನಡದ ನಟ ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾ ಆರೋಗ್ಯವಂತ ಮಗುವಿಗೆ (Baby boy) ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದೆ. ಕೆಲವೇ ದಿನಗಳ ಕೆಳಗೆ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು ಧ್ರುವ ಸರ್ಜಾ. ಈಗಾಗಲೇ ಈ ದಂಪತಿಗೆ ಒಂದು ಹೆಣ್ಣು ಮಗುವಿದೆ.

ಇತ್ತೀಚೆಗೆ ಆಕ್ಷನ್ ಕಿಂಗ್ ಧ್ರುವ ಪತ್ನಿ ಪ್ರೇರಣಾಗೆ (Prerana) ಸೀಮಂತ (Baby Shower) ಕಾರ್ಯಕ್ರಮ ನೆರವೇರಿದ್ದು, ಈ ಕುರಿತ ವಿಡಿಯೋವೊಂದನ್ನು ನಟ ಶೇರ್ ಮಾಡಿದ್ದರು. ಕನಕಪುರ ರಸ್ತೆಯ ಫಾರ್ಮ್ ಹೌಸ್ನಲ್ಲಿ ಪ್ರೇರಣಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆಯಿತು. ಚಿರು ಸರ್ಜಾ (Chiru) ಫೋಟೋವನ್ನ ಫೋನ್ನಲ್ಲಿ ಧ್ರುವ ಪುತ್ರಿ ನೋಡ್ತಿರುವ ತುಣುಕು ಗಮನ ಸೆಳೆಯುತ್ತಿದೆ.

ಈಗ ಮನೆಗೆ ಗಂಡು ಮಗುವಿನ ಆಗಮನ ಆಗಿದೆ. ಕಳೆದ ವರ್ಷ ಮುದ್ದು ಮಗಳ ಆಗಮನವಾಗಿತ್ತು. ಆಗಸ್ಟ್ 25ರಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧ್ರುವ ಸರ್ಜಾ 2 ನೇ ಮಗುವಿನ ಬಗ್ಗೆ ಗುಡ್ ನ್ಯೂಸ್ ಹೇಳಿದ್ದರು. ಇದೀಗ ಸೀಮಂತ ಆದ ಬೆನ್ನಲ್ಲೇ ಧ್ರುವ ಪತ್ನಿಯ ಹೆರಿಗೆಯಾಗಿದೆ.

ಇದನ್ನೂ ಓದಿ: ಚೈತ್ರಾ ಜೈಲು ಸೇರಿದ ಸಂಭ್ರಮಾಚರಣೆ: 101 ಈಡುಗಾಯಿ ಹೊಡೆದದ್ದು ಎಲ್ಲಿ ಮತ್ತು ಯಾಕೆ ?!

Leave A Reply

Your email address will not be published.