ಸೈಮಾದಲ್ಲಿ 10 ಪ್ರಶಸ್ತಿಗಳಿಗೆ ಮುತ್ತಿಕ್ಕಿದ ಕಾಂತಾರ ಸಿನಿಮಾ; ಅವಾರ್ಡ್ ಗಳನ್ನು ರಿಷಭ್ ಅರ್ಪಿಸಿದ್ದ್ಯಾರಿಗೆ?

ಬೆಂಗಳೂರು; ಬಿಡುಗಡೆದಾಗಿನಿಂದ ಇಲ್ಲಿಯವರೆಗೂ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕಾಂತಾರ. ಕಾಂತಾರ ಒಂದು ಹೊಸ ಅಲೆಯನ್ನೇ ಸೃಷ್ಟಿ ಮಾಡಿದೆ ಅಂದ್ರೆ ಅದು ಅತಿಶಯೋಕ್ತಿಯಲ್ಲ. ಕರಾವಳಿಯ ಮಂದಿಗಷ್ಟೇ ಗೊತ್ತಿದ್ದ ಭೂತಾರಾಧನೆಯನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸಿದ್ದು ಕಾಂತಾರ ಸಿನಿಮಾ.

ಇದೀಗ ಕಾಂತಾರ ಸಿನಿಮಾ ಸೈಮಾದಲ್ಲೂ ಸದ್ದು ಮಾಡಿದೆ. ಸೈಮಾ ಅವಾರ್ಡ್ಸ್  ನಲ್ಲಿ ಕಾಂತಾರ ಬರೋಬ್ಬರಿ 10 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇತ್ತೀಚೆಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ  ದುಬೈನಲ್ಲಿ ನಡೆದಿದ್ದು. ಅದರಲ್ಲಿ ಬರೋಬ್ಬರಿ 10 ವಿಭಾಗಗಳಲ್ಲಿ ಕಾಂತಾರ ಸಿನಿಮಾಗೆ ಅವಾರ್ಡ್​ ಸಿಕ್ಕಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಹಾಸ್ಯ ನಟ, ಅತ್ಯುತ್ತಮ ಸಂಗೀತ ನಿರ್ದೇಶನ ಮುಂತಾದ ವಿಭಾಗಗಳಲ್ಲಿ ಕಾಂತಾರ ಪ್ರಶಸ್ತಿ ಬಾಚಿಕೊಂಡಿದೆ.

ನಟ ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ‘ದೈವ ನರ್ತಕರು, ಅಪ್ಪು ಸರ್ ಮತ್ತು ಕನ್ನಡಿಗರಿಗೆ ಈ ಯಶಸ್ಸು ಸಮರ್ಪಣೆ’ ಎಂದ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

https://m.facebook.com/story.php?story_fbid=pfbid0pNWh5g7EtdC68L5KT6Hw1UED9d7uDsfudUM8X22jdz6cgbTsQqq8tMKiWh6N1199l&id=100009950929108&mibextid=ZbWKwL

‘ಜನರ ಮನ್ನಣೆಯಿಂದ ಸಿಕ್ಕ ಪ್ರೀತಿಯೇ ಕಾಂತಾರ ಸಿನಿಮಾದ ಯಶಸ್ಸಿಗೆ ಕಾರಣ. ಸೈಮಾ ಅವಾರ್ಡ್ಸ್​ನಲ್ಲಿ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ, ಅತ್ಯುತ್ತಮ ನಟ, ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮನ ತುಂಬಿ ಬಂದಿದೆ. ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೆಯೇ ಇರಲಿ. ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಈ ಎಲ್ಲಾ ಯಶಸ್ಸು ಸಮರ್ಪಣೆ’ ಎಂದು ರಿಷಬ್​ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ.

Leave A Reply

Your email address will not be published.