ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೇಜ್ ಮದ್ಯ ಕುಡಿಯುವ ಚಾಲೆಂಜ್ ಹಾಕಿದ ಭೂಪ; ಅತೀ ಹೆಚ್ಚು ಕುಡಿದವ ಕೊನೆಗೆ ಏನಾದ?

 

ಹಾಸನ : ಬೆಟ್ಟಿಂಗ್ ಹುಚ್ಚು ಅದೆಷ್ಟೋ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ. ಅದೆಷ್ಟೋ ಜನ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.  ಅತಿಯಾದ್ರೆ ಅಮೃತ ಕೂಡ ವಿಷ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೇಜ್ ಮದ್ಯ ಕುಡಿಯುವ ಬಗ್ಗೆ ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜ್ ಮತ್ತು ತಿಮ್ಮೇಗೌಡ ಚಾಲೆಂಜ್ ಕಟ್ಟಿದ್ದಾರೆ.ಇಬ್ಬರಿಗೂ ಕೃಷ್ಣೇಗೌಡ ಎಂಬವರು ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದಾರೆ. ಬೆಟ್ಟಿಂಗ್ ನಲ್ಲಿ ತಿಮ್ಮೇಗೌಡ ಅತೀ ಹೆಚ್ಚು ಮದ್ಯ ಸೇವಿಸಿದ್ದಾರೆ. ಮದ್ಯ ಕುಡಿಯುತ್ತಲೇ ರಕ್ತ ವಾಂತಿ ಮಾಡಿಕೊಂಡು ಬಸ್ ನಿಲ್ದಾಣದಲ್ಲೇ ತಿಮ್ಮೇಗೌಡ ಬಿದ್ದಿದ್ದಾರೆ.

ತಿಮ್ಮೇಗೌಡ ಅಸ್ವಸ್ಥ ನಾಗಿ ಬೀಳುತ್ತಲೇ ಸ್ಥಳದಿಂದ ದೇವರಾಜು ಮತ್ತು ಕೃಷ್ಣೇಗೌಡ ಎಸ್ಕೇಪ್ ಆಗಿದ್ದಾರೆ. ಕೊನೆಗೆ ಕುಡಿದು ಸುಸ್ತಾಗಿ ಬಿದ್ದಿದ್ದ ತಿಮ್ಮೇಗೌಡನನ್ನು ಗ್ರಾಮಸ್ಥರು ಮನೆಗೆ ಕರೆತಂದು ಬಿಟ್ಟಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಯಾರೂ ಇರಲಿಲ್ಲಯ ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ತೆರಳಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ತಿಮ್ಮೇಗೌಡ ಮನೆಯಲ್ಲಿ ಸಾವನ್ನಪ್ಪಿದ್ದಾರೆ.ಘಟನೆ ಬಗ್ಗೆ ತಿಮ್ಮೇಗೌಡರ ಪುತ್ರಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ದೇವರಾಜು ಹಾಗೂ ಕೃಷ್ಣೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

 

 

Leave A Reply

Your email address will not be published.