Shivamogga: ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾದ ಡಿಗ್ರಿ ಕಾಲೇಜ್ ಹುಡುಗರು

Shivamogga news student drowns in Tungabhadra river during catching fish

Shivamogga: ಮತ್ತೊಂದು ಜಲ ದುರಂತ ನಡೆದಿದೆ. ತುಂಗಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾಗಿ ಮರಣಿಸಿದ ಘಟನೆ ಶಿವಮೊಗ್ಗದ(Shivamogga) ಕುರುಬರ ಪಾಳ್ಯ ಎಂಬಲ್ಲಿ ನಡೆದಿದೆ.

ತುಂಗೆಯಲ್ಲಿ ನೀರು ಪಾಲಾದ ಹುಡುಗರನ್ನು ಮೊಹಮ್ಮದ್ ಪೈಸೆಲ್ ಮತ್ತು ಅಂಜುಮ್ ಖಾನ್ ಎಂದು ಗುರುತಿಸಲಾಗಿದೆ. ಇಬ್ಬರೂ 19 ವರ್ಷ ಪ್ರಾಯದ ಯುವಕರು. ಮೊಹಮ್ಮದ್ ಪೈಸಲ್ ಮತ್ತು ಇಲಿಯಾಸ್ ಶಿವಮೊಗ್ಗದಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರ ತಂಡ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದು ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗಣೇಶ ಚತುರ್ಥಿ ಹಿನ್ನೆಲೆ: ಇಂದು ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧ !

Leave A Reply

Your email address will not be published.