ವಾಟ್ಸಾಪ್ ಚಾನಲ್ ಆರಂಭಿಸಿದ ಸಿಎಂ ಸಿದ್ದರಾಮಯ್ಯ; ಈ ಚಾನೆಲ್ ಅನ್ನು ನೀವು ಫಾಲೋ ಮಾಡ್ಬೋದು

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ವಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ. ಸೆಪ್ಟೆಂಬರ್ 12 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾನಲ್ ಆರಂಭಿಸಿ ಈಗಾಗಲೇ 50,000ಕ್ಕೂ ಅಧಿಕ ಸಬ್ ಸ್ಕ್ರೈಬರ್ಸ್  ಹೊಂದಿದ್ದಾರೆ.ಇಡೀ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸಾಪ್ ಚಾನಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿದ್ದಾರೆ.

 

ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು ಚೀಫ್ ಮಿ‌ನಿಸ್ಟರ್ ಆಫ್ ಕರ್ನಾಟಕ ಎಂಬ ಹೆಸರಿನ ಚಾನಲ್ ಕಾರ್ಯಾರಂಭ ಮಾಡಿದೆ.ಈ ಚ್ಯಾನೆಲ್‌ನಲ್ಲಿ ಸರ್ಕಾರದ ಯೋಜನೆಗಳು, ಮುಖ್ಯಮಂತ್ರಿಗಳ ಕಾರ್ಯಕ್ರಮ, ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಪಡೆಯಬಹುದಾಗಿದೆ. ವಾಟ್ಸಾಪ್ ಚ್ಯಾನೆಲ್‌ ಲಿಸ್ಟ್‌ನಲ್ಲಿ ನೀವು ಕೂಡ ಸಿಎಂ ಚ್ಯಾನೆಲ್‌ನ್ನು ಫಾಲೋ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ.

ವಾಟ್ಸಾಪ್ ಚಾನಲ್ ಸೆಕ್ಷನ್ ನಲ್ಲಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಎಂದು ಸರ್ಚ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು ಸಬ್ ಸ್ಕ್ರೈಬ್ ಮಾಡಬಹುದಾಗಿದೆ.ಕಳೆದ ವಾರ ವಾಟ್ಸಾಪ್ ಚಾನೆಲ್ ಎಂಬ ಹೊಸ ಆವಿಷ್ಕಾರವನ್ನು ವಾಟ್ಸಾಪ್ ಪರಿಚಯಿಸಿದೆ.

Leave A Reply

Your email address will not be published.