ಮಾನಸಿಕ ಅಸ್ವಸ್ಥ ಅಮ್ಮ ಇದ್ದಕ್ಕಿದ್ದಂತೆ ನಾಪತ್ತೆ; ತಾಯಿಯ ಪತ್ತೆಗೆ ಬಹುಮಾನ ಘೋಷಿಸಿದ ಮಗಳು

ಕೋಲಾರ; ಹೆತ್ತವರಿಗೆ ವಯಸ್ಸಾದರೆ ಸಾಕು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಪ್ಲ್ಯಾನ್ ಮಾಡುವ ಮಂದಿಯೇ ಹೆಚ್ಚು. ಅಂತಹದರಲ್ಲಿ ಇಲ್ಲೊಬ್ಬಳು ಮಗಳು ನಾಪತ್ತೆಯಾದ ತನ್ನ ಮಾನಸಿಕ ಅಸ್ವಸ್ಥೆ, ಮಾತು ಬಾರದ ಅಮ್ಮನ ಪತ್ತೆಗಾಗಿ ಏನ್ ಮಾಡಿದ್ದಾಳೆ ನೋಡಿ..

ಕೋಲಾರ ಜಿಲ್ಲೆಯ ಮುಳಬಾಗಿಲಿನ ತಾಲೂಕಿನ ಮುತ್ಯಾಲಪೇಟೆಯ ಲಕ್ಷ್ಮಮ್ಮ (52) ಮಾನಸಿಕ ಅಸ್ವಸ್ಥೆ. ಮಾತು ಕೂಡ ಬರಲ್ಲ. ಇವರು ಕಳೆದ ನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದಾರೆ. ಆಕೆಗಾಗಿ ಕುಟುಂಬಸ್ಥರು ನಿರಂತರವಾಗಿ ಹುಡುಕಿದರೂ ಲಕ್ಷ್ಮಮ್ಮ ಪತ್ತೆಯಾಗಿಲ್ಲ. ಅಲ್ಲದೇ ಮುಳಬಾಗಿಲು ಪೊಲೀಸರಿಗೂ ಈ ಸಂಬಂಧ ದೂರು ನೀಡಲಾಗಿದೆ. ಆದರೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹೀಗಾಗಿ ಲಕ್ಷ್ಮಮ್ಮ ಅವರ ಮಗಳು ಪ್ರಮೀಳಾ ತನ್ನ ತಾಯಿಯ ಪತ್ತೆಗಾಗಿ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ತಾಯಿಯ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಹೀಗಾದರೂ ತನ್ನ ತಾಯಿ ಸಿಕ್ತಾರಾ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಪ್ರಮೀಳಾ. ಅವರ ನಿರೀಕ್ಷೆಗೆ ಯಾವ ರೀತಿ ಸ್ಪಂದನೆ ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Leave A Reply

Your email address will not be published.