ವಿಧಾನಸಭೆಯೊಳಗೆ ಮಾತ್ರ ನಮ್ದು ಗಲಾಟೆ, ಹೊರ್ಗಡೆ ನಾವ್ ಎಲ್ರೂ ಸ್ನೇಹಿತರೇ: ಯು.ಟಿ. ಖಾದರ್

ಮಂಗಳೂರು;ವಿಧಾನಸಭೆಯಲ್ಲಿ ನಡೆಯುವ ಗಲಾಟೆಗಳು ಕೇವಲ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತವೆ. ಹೊರಗಡೆ ಬಂದಾಗ ಎಲ್ಲಾ ಪಕ್ಷಗಳ ನಾಯಕರು ಹೆಗಲ ಮೇಲೆ ಹೆಗಲಿಗೆ ಕೈ ಹಾಕಿಕೊಂಡು ಹೋಗುವಷ್ಟು ಸ್ನೇಹಿತರಾಗಿರುತ್ತಾರೆ. ನೀವು ಗಲಾಟೆಯನ್ನು ಟಿವಿಯಲ್ಲಿ ನೋಡಿ ಇಲ್ಲಿ ಗಲಾಟೆ ಮಾಡಿಕೊಳ್ಳಬೇಡಿ.” ಎಂದು ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರು ಹೇಳಿದ್ದಾರೆ.

ಬಂಟರ ಯಾನೆ ನಾಡವರ ಮಾತೃ ಸಂಘ, ಸಿದ್ದಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಬಂಟ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವ ಏರ್ಪಡಿಸಲಾಗಿತ್ತು. ಇದರ ಅಂಗವಾಗಿ ಬಂಟ್ಸ್ ಹಾಸ್ಟೆಲ್ ಎಂಬಲ್ಲಿಯ ಓಂಕಾರ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಖಾದರ್ ಮಾತನಾಡುತ್ತಿದ್ದರು.

ಆ ಸಂದರ್ಭದಲ್ಲಿ ಮಾತನಾಡಿದ ಕಾತರವರು ಬಂಟರ ಯಾದೆ ನಾಡವರ ಎಲ್ಲಾ ಕಾರ್ಯಕ್ರಮಗಳು ಅದ್ದೂರಿಯಿಂದ ನಡೆಯುತ್ತವೆ. ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸಿ ನಡೆಯುವ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ ಈ ಮೂಲಕ ನಾವು ಎಲ್ಲಾ ದಾಟಿ ಧರ್ಮಗಳ ಮಧ್ಯೆ ಪ್ರೀತಿಯನ್ನು ಸೋದರತೆ ಬೆಳೆಸಬೇಕು ಅದರ ಜೊತೆಗೆ ಸ್ವಸ್ತ ಸಮಾಜದ ನಿರ್ಮಾಣವಾಗಲಿ ಎಂದಿದ್ದಾರೆ ನಾನು ಸ್ಪೀಕರ್ ಆದ ಬಳಿಕ ಪ್ರತಿಪಕ್ಷಗಳಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟು ಸರಕಾರವನ್ನು ನಡೆಯಲು ನನ್ನ ಸಹಕಾರ ನೀಡುತ್ತಿದ್ದೇನೆ ಇದೇ ಕಾರಣಕ್ಕೆ ಸ್ವೀಕರಿ ಇಲ್ಲ ಎನ್ನುವವರು ಇದ್ದಾರೆ ಎಂದು ಖಾದರವರು ಮನದಾಳದ ಮಾತನಾಡಿದ್ದಾರೆ.

ಇವತ್ತು ಬಂಟ್ಸ್ ಹಾಸ್ಟೆಲ್ ಕೇವಲ ಬಂಟರುಗಳು ಮಾತ್ರವಲ್ಲದೆ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಹೀಗೆ ಎಲ್ಲರೂ ವಾಸ್ತವ್ಯವಿದ್ದು, ಇದು ಇಡೀ ಸಮಾಜಕ್ಕೆ ಮಾದರಿ ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯ ಬಂಟ ಸಮಾಜಕ್ಕೆ ಇದೆ. ಈ ಜವಾಬ್ದಾರಿಯನ್ನು ಸಮುದಾಯದ ಹಿರಿಯರು ತೆಗೆದುಕೊಳ್ಳಬೇಕು. ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಗಣೇಶನ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದು ಅವರು ಶುಭ ಕೋರಿದರು.

ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಮ್ ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೃಷ್ಣ ಪ್ರಸಾದ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಜಿಲ್ಲಾ ಸಂಚಾಲಕ ಬಿ.ನಾಗರಾಜ ಶೆಟ್ಟಿ, ಎಮ್ ಸಂಜೀವ ಶೆಟ್ಟಿ ಕಾಸರಗೋಡು ಉಪಸ್ಥಿತರಿದ್ದರು.

Leave A Reply

Your email address will not be published.