ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಬಯಲಾಗುತ್ತಿದೆ ಕ್ಷಣಕ್ಕೊಂದು ಹೆಸರು; ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ವಿಚಾರಣೆ ಹಾಜರಾಗುವಂತೆ CCB ನೋಟಿಸ್

 

ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಕ್ಷಣಕ್ಕೊಂದು ಹೆಸರು ಬಯಲಾಗುತ್ತಿದೆ. ಇದೀಗ ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ವಿಚಾರಣೆ ಹಾಜರಾಗುವಂತೆ CCB ನೋಟಿಸ್ ನೀಡಿದೆ.

ಹಿಂದೂ ಕಾರ್ಯಕರ್ತ ತುಡುಕೂರು ಮಂಜುಗೆ ಸಿಸಿಬಿ ನೋಟಿಸ್ ನೀಡಿದೆ. ತುಡುಕೂರು ಮಂಜು ಉದ್ಯಮಿ ಗೋವಿಂದಬಾಬು ಪೂಜಾರಿ ಅವರು ರಮೇಶ್, ಧನರಾಜ್ ಅವರನ್ನು ಭೇಟಿಯಾಗೋದಕ್ಕೆ ಸಹಾಯ ಮಾಡಿದ್ದನು. ಅಲ್ಲದೇ ಇದೇ ಮಂಜು ಮೂಲಕ ಆರೋಪಿ ಗಗನ್ ಅವರ ಹಿನ್ನಲೆಯನ್ನು ಉದ್ಯಮಿ ಗೋವಿಂದಬಾಬು ಪೂಜಾರಿ ಕಲೆ ಹಾಕಿದ್ದರು ಎನ್ನಲಾಗಿದೆ.

ಕಳೆದ ಮೇ ತಿಂಗಳಿನಲ್ಲಿ ಮಂಜುನನ್ನು ಭೇಟಿಯಾಗಿಉದ್ಯಮಿ ಗೋವಿಂದಬಾಬು ಪೂಜಾರಿ ರಮೇಶ್ ಹಾಗೂ ಧನರಾಜ್ ಪರಿಚಯ ಮಾಡಿಕೊಂಡಿದ್ದರು. ಅಲ್ಲದೇ ಗಗನ್ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದರು. ಈ ಹಿನ್ನಲೆಯಲ್ಲಿ ಭಜರಂಗದಳದ ಮಾಜಿ ಸಂಚಾಲಕ ತುಡುಕೂರು ಮಂಜುಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.

 

Leave A Reply

Your email address will not be published.