Indigo Passenger: ಹಾರಾಟದ ದಾರಿ ಮಧ್ಯೆ ವಿಮಾನದ ಎಮರ್ಜನ್ಸಿ ಡೋರ್ ಓಪನ್ ಮಾಡಲು ಹೋದ ಭೂಪ !

ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ವಿಮಾನ ಪ್ರಯಾಣದ ಮೇಲೆ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ವಿಚಿತ್ರ ಮತ್ತು ಆತಂಕದ ಘಟನೆ ವರದಿಯಾಗಿದೆ. (Indigo Passenger tries to open the Emergency door during mid air flight)

ಮಂಗಳವಾರ ರಾತ್ರಿ ದೆಹಲಿಯಿಂದ ಹೊರಟಿದ್ದ ಇಂಡಿಗೋ 6341 ವಿಮಾನ ಚೆನ್ನೈಗೆ ತೆರಳಬೇಕಿತ್ತು, ಆದರೆ ದಾರಿಮಧ್ಯ ವ್ಯಕ್ತಿಯೋರ್ವ, ವಿಮಾನ ಆಕಾಶದಲ್ಲಿ ಹಾರುತ್ತಾ ಇರುವಾಗಲೇ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಸುತ್ತಮುತ್ತ ಇದ್ದವರು ತಕ್ಷಣ ಆತನನ್ನು ತಡೆದು ಹಿಡಿದಿಟ್ಟಿದ್ದಾರೆ.

ಸದ್ಯ ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಮಣಿಕಂಡನ್ ಎಂದು ಗುರುತಿಸಲಾಗಿದೆ. ವಿಮಾನ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದು ಹಿಡಿಯುತ್ತಿದ್ದಂತೆ ಆತನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ. ನಂತರ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಅಧಿಕಾರಿಗಳಿಗೆ ಆತನನ್ನು ಹಸ್ತಾಂತರ ಮಾಡಲಾಗಿದೆ. ಜೊತೆಗೆ ಆತನ ವಿರುದ್ಧ ಇಂಡಿಗೋ ಅಧಿಕಾರಿಗಳು ಪ್ರಕರಣ ದಾಖಲಿಸಿ, ಇದೀಗ ತನಿಖೆ ಶುರುವಾಗಿದೆ.

ಈ ವ್ಯಕ್ತಿಯ ವಿರುದ್ಧ, ಪ್ರಯಾಣಿಕರು ತೋರಿದ ಅಶಿಸ್ತಿನ ಫಾರ್ಮ್ ಭರ್ತಿ ಮಾಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇದೇ ವರ್ಷದ ಏಪ್ರಿಲ್ ನಲ್ಲಿ ಇಂಥಹುದೇ ಒಂದು ಘಟನೆ ದೆಹಲಿ ಬೆಂಗಳೂರು ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ನಡೆದಿತ್ತು. ಅಲ್ಲಿ 40 ವರ್ಷದ ಪ್ರಯಾಣಿಕರು ಒಬ್ಬರು ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದರು. ಅಂದು ವಿಮಾನಯಾನ ಸಂಸ್ಥೆಗಳು ಹೇಳುವ ಪ್ರಕಾರ ಸದರಿ ಪ್ರಯಾಣಿಕ ಕುಡಿದಿದ್ದರು ಎನ್ನಲಾಗಿದೆ.

Leave A Reply

Your email address will not be published.