ಹುಬ್ಬಳ್ಳಿ; ಪೊಲೀಸರು ಗಣೇಶೋತ್ಸವದ ಬಂದೋಬಸ್ತ್ ನಲ್ಲಿ ಬ್ಯುಸಿಯಾಗಿದ್ದರಿಂದ ಅಲರ್ಟ್ ಆದ ಕಳ್ಳರು; ಮನೆಯವರನ್ನು ಕಟ್ಟಿ ಹಾಕಿ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನ, ನಗದು ದರೋಡೆ

ಹುಬ್ಬಳ್ಳಿ; ಪೊಲೀಸರು ಗಣೇಶೋತ್ಸವದ ಬಂದೋಬಸ್ತ್  ನಲ್ಲಿ ಬ್ಯುಸಿಯಾಗಿರೋದನ್ನು ನೆಪ ಮಾಡಿಕೊಂಡು ಅಲರ್ಟ್ ದರೋಡೆಕೋರರು ಮನೆಯವರನ್ನು ಕಟ್ಟಿ ಹಾಕಿ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನ, ನಗದು  ದರೋಡೆ ಮಾಡಿದ ಘಟನೆ ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ.

ಇಲ್ಲಿನ ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ವಿದ್ಯಾ ಮಂದಿರ ಬುಕ್ ಡಿಪೋ ಮಾಲೀಕರಾದ ಉಲ್ಲಾಸ್ ದೊಡ್ಡಮನಿ ಅವರ ಕಿಟಕಿಯ ಕಬ್ಬಿಣದ ಗ್ರೀಲ್ ಕಟ್​​ ಮಾಡಿ ಮನೆಯೊಳಕ್ಕೆ ನುಗ್ಗಿದ 8 ಜನ ದರೋಡೆಕೋರರು ಮನೆಯಲ್ಲಿದ್ದ 6 ಮಂದಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.

ಈದ್ಗಾ ಮೈದಾನದ ಗಣೇಶನ ವಿಸರ್ಜನೆ ಜನಸಂದಣಿಯ ವೇಳೆ ಎಲ್ಲರೂ ಬ್ಯುಸಿಯಾಗಿರುವಾಗ ದರೋಡೆ ಮಾಡಿದ್ದಾರೆ. ಗಣೇಶನ ವಿಸರ್ಜನೆಗೆ ಐದು ಸಾವಿರ ಪೊಲೀಸರ ನಿಯೋಜನೆ ಮಧ್ಯೆ ದರೋಡೆ ನಡೆದಿರುವುದು  ಆತಂಕ ಮೂಡಿಸಿದೆ. ಬಹುತೇಕ ಪೊಲೀಸರು ಗಣೇಶೋತ್ಸವಕ್ಕೆ ಬಂದೋಬಸ್ತ್​​ ತೆ ಸಾಮಾನ್ಯ ಗಸ್ತು ತಿರುಗಲು ಪೊಲೀಸರನಲ್ಲಿದ್ದರಿಂದ ಪೊಲೀಸರ ಕೊರತೆ ಎದುರಾಗಿದೆ. ಇದೇ ಸಮಯ ಸಾಧಿಸಿದ ಕಳ್ಳರು ಭಾರೀ ದರೋಡೆ ನಡೆಸಿದ್ದಾರೆ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

 

Leave A Reply

Your email address will not be published.