ಹ್ಯಾಕ್ ಆದ್ವಾ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಮುಖಂಡರ ಫೇಸ್ ಬುಕ್ ಪೇಜ್ ಗಳು? ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದೇನು?

ಉಡುಪಿ: ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಮುಖಂಡರ ಫೇಸ್ ಬುಕ್ ಪೇಜ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಹೇಳಿಕೆ ನೀಡಿರುವ ಶ್ರೀಕಾಂತ್ ಶೆಟ್ಟಿ, ಹಿಂದೂ ಜಾಗರಣಾ ವೇದಿಕೆಯ ಎಲ್ಲಾ ಜಿಲ್ಲಾ ನಾಯಕರ ಫೇಸ್ ಬುಕ್ ಅಕೌಂಟ್, ವೆಬ್ ಪೇಜ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹಿಂದೂ ಜಾಗರಣಾ ವೇದಿಕೆಯ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಮುಖಂಡರ ಫೇಸ್ ಬುಕ್ ಪ್ರೊಫೈಲ್ ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದ್ದು, ಸರ್ಕಾರದ ಸೂಚನೆ ಹೋಗಿ ಮಾಡಿದ್ದಾರೋ ಅಥವಾ ಹ್ಯಾಕರ್ಸ್ ಗಳನ್ನು ಬಳಸಿ ಮಾಡಿದ್ದರೋ ಎಂಬುದು ತನಿಖೆಯಾಗಬೇಕು ಎಂದು ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದ್ದಾರೆ.

2014 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪರ ದೊಡ್ಡ ಮಟ್ಟದ ಅಭಿಯಾನ ನಡೆದಿದ್ದ ಕಾರಣ ಅದೇ ರೀತಿಯ ಅಭಿಯಾನ ಈ ಬಾರಿ ಅಗಬಾರದು ಎನ್ನುವ ನಿಟ್ಟಿನಲ್ಲಿ ಹಿಂದೂ ಮುಖಂಡರ ಪೇಜ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿರುವ ಶ್ರೀಕಾಂತ್ ಶೆಟ್ಟಿ, ಹಿಂದೂ ಜಾಗರಣಾ ವೇದಿಕೆ ಸಾಮಾಜಿಕ ಜಾಲತಾಣವನ್ಮು ನಂಬಿಕೊಂಡಿರುವ ಫೇಸ್ ಬುಕ್ ಹುಲಿಗಳಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.