ಉಡುಪಿ; ಬಟ್ಟೆಯಂಗಡಿ ನೆಪದಲ್ಲಿ ಯುವಕನಿಗೆ ವಂಚನೆ ಪ್ರಕರಣ; ಚೈತ್ರಾ ಕುಂದಾಪುರಳನ್ನು ವಶಕ್ಕೆ ನೀಡಲು ಕೋಟ ಪೊಲೀಸರಿಂದ ನ್ಯಾಯಾಲಯಕ್ಕೆ ಅರ್ಜಿ LATEST NEWS

ಉಡುಪಿ; ಬಟ್ಟೆಯಂಗಡಿ ನೆಪದಲ್ಲಿ ಯುವಕನಿಗೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೈತ್ರಾ ಕುಂದಾಪುರಳನ್ನು ವಶಕ್ಕೆ ನೀಡಲು ಕೋಟ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾನದ ಸುದಿನ ಎಂಬ ಯುವಕನಿಗೂ ಚೈತ್ರಾ 5 ಲಕ್ಷ ರೂಪಾಯಿ ವಂಚಿಸಿದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ತನಿಖೆಗೆ ಕೋಟ ಠಾಣೆಯ ಪೊಲೀಸರಿಗೆ ಆಕೆ ಬೇಕಾಗಿದ್ದಾಳೆ. ಹಾಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಮೀನು ವ್ಯಾಪಾರ ಮಾಡಿಕೊಂಡಿದ್ದ ಸುದಿನ ಎಂಬಾತನಿಗೆ, ಕೇಸರಿ ಧ್ವಜ, ಬಟ್ಟೆಗಳ ಅಂಗಡಿ ಹಾಕಿಕೊಡುವುದಾಗಿ ನಂಬಿಸಿದ್ದ ಚೈತ್ರಾ ಆತನಿಂದ 2018ರಿ೦ದ 2022ರ ವರೆಗೆ ಹಂತ ಹಂತವಾಗಿ 5 ಲಕ್ಷ ರು.ಪಡೆದಿದ್ದಳು. ನಂತರ ಮೋಸ ಮಾಡಿದ್ದಾಳೆ. ಹಣ ವಾಪಾಸ್ ಕೇಳಿದ್ದಕ್ಕೆ ರೇಪ್ ಕೇಸ್ ಹಾಕೋದಾಗಿ ಹೇಳಿ ಜೀವ ಬೆದರಿಕೆ ಹಾಕಿದ್ದಳು ಎಂದು ಸುದಿನ ಅವರು ಕೋಟ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಈ ದೂರಿನ ಹಿನ್ನೆಲೆಯಲ್ಲಿ ಕೋಟ ಠಾಣೆಯ ಪೊಲೀಸರು ಆಕೆಯ ವಿಚಾರಣೆಗೆ ತಮ್ಮ ವಶಕ್ಕೆ ಒಪ್ಪಿಸುವಂತೆ ಉಡುಪಿ ಜಿಲ್ಲಾ ನ್ಯಾಯಾಲಯದ ಮೂಲಕ ಬೆಂಗಳೂರು ಒಂದನೇ ಮುಖ್ಯ ಅಪರ ಮುಖ್ಯ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯ ಈಗಾಗಲೇ ಸೆಪ್ಟೆಂಬರ್ 23ರ ವರೆಗೆ ಆಕೆಯನ್ನು ಸಿಸಿಬಿ ಪೊಲೀಸರ ವಶಕ್ಕೆ ನೀಡಿದ್ದು, ಪ್ರಸ್ತುತ ಪೊಲೀಸರಿಂದ ಚೈತ್ರಾಳ ವಿಚಾರಣೆ ಪೂರ್ಣಗೊಂಡಿಲ್ಲ. ಆದ್ದರಿಂದ ಕೋಟ ಠಾಣೆಯ ಪೊಲೀಸರು 23ರಂದು ನ್ಯಾಯಾಲಯ ಆದೇಶಕ್ಕೆ ಕಾಯಬೇಕಾಗಿದೆ.

 

Leave A Reply

Your email address will not be published.