ಚಲಿಸುತ್ತಿದ್ದ ಟಿಂಬರ್ ಲಾರಿಯಿಂದ ಬೈಕ್ ಸವಾರನ ತಲೆ ಮೇಲೆ ಬಿದ್ದ ಮರದ ತುಂಡು

ಶಿವಮೊಗ್ಗ; ಚಲಿಸುತ್ತಿದ್ದ ಟಿಂಬರ್ ಲಾರಿಯಿಂದ ಬೈಕ್ ಸವಾರನ ತಲೆ ಮರದ ತುಂಡು ಮೇಲೆ ಬಿದ್ದ ಘಟನೆ ರಿಪ್ಪನ್ ಪೇಟೆ ಸಮೀಪದ ಬಿಲ್ಲೇಶ್ವರದಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಕಡಸೂರು ಗ್ರಾಮದ ನವೀನ್(32) ಗಂಭೀರ ಗಾಯಗೊಂಡ ಯುವಕ. ನವೀನ್ ಬಿಲ್ಲೇಶ್ವರ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾಗ ನವೀನ್ ಕುತ್ತಿಗೆಯ ಮೇಲೆ ಟಿಂಬರ್ ಲಾರಿಯಲ್ಲಿದ್ದ ಮರದ ತುಂಡು ಬಿದ್ದಿದೆ. ಪರಿಣಾಮ ಅವರ ಕುತ್ತಿಗೆಯ ಭಾಗ ತುಂಡಾಗಿ ತೀವ್ರ ರಕ್ತಸ್ರಾವವಾಗಿದೆ.ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave A Reply

Your email address will not be published.