ಐಫೋನ್ 15 ಸೀರೀಸ್‌ ಕೊಳ್ಳಲು ಹತ್ತಾರು ಗಂಟೆ ಕ್ಯೂ ನಲ್ಲಿ ನಿಂತ ಗ್ರಾಹಕರು; ಫೋನ್ ನೀಡಲು ತಡ ಮಾಡಿದ್ದಕ್ಕೆ ಅಲ್ಲಿ ನಡೆದಿದ್ದೇನು?

ನವದೆಹಲಿ: ಐಫೋನ್  15 ಸೀರೀಸ್‌ (iPhone 15 Series) ನ ಮಾರಾಟ ಭಾರತದಲ್ಲಿ ಅಧಿಕೃತವಿ ಆರಂಭವಾಗಿದ್ದು, ಅದನ್ನು ಕೊಳ್ಳಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಅದರಲ್ಲೂ ಯುವಜನತೆ ಈ ಫೋನ್ ಕೊಳ್ಳಲು ನಾನಾ ಸರ್ಕಸ್ ಮಾಡುತ್ತಿದ್ದಾರೆ.ಇದೇ ರೀತಿ ಫೋನ್ ಕೊಳ್ಳಲು ಹೋಗಿ ಉತ್ತರ ದೆಹಲಿಯ ಕಮಲಾ ನಗರ ಮಾರುಕಟ್ಟೆಯಲ್ಲಿ ಘಚನೆಯೊಂದು ನಡೆದಿದೆ.

ಉತ್ತರ ದೆಹಲಿಯ ಕಮಲಾ ನಗರ ಮಾರುಕಟ್ಟೆಗೆ ಐಫೋನ್ 15 ಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದಾರೆ. ಈ ವೇಳೆ ಇಬ್ಬರು ಗ್ರಾಹಕರಾದ ಜಸ್ಕಿರತ್ ಸಿಂಗ್ ಮತ್ತು ಮನದೀಪ್ ಸಿಂಗ್, ಎಲೆಕ್ಟ್ರಾನಿಕ್ಸ್ ಶೋರೂಮ್‌ನ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರು ಕೋಪಗೊಂಡು ಹಲ್ಲೆ ನಡೆಸಿದ್ದಾರೆ. 10 ಕ್ಕೂ ಹೆಚ್ಚು ಇತರೆ ಸಿಬ್ಬಂದಿ ಧಾವಿಸಿದರೂ ಹಲ್ಲೆ ತಪ್ಪಿಸುವುದನ್ನು ಸಾಧ್ಯವಾಗಿಲ್ಲ. ಸಿಬ್ಬಂದಿ ಟೀ-ಶರ್ಟ್‌ ಕೂಡ ಹರಿದು ಹಾಕಲಾಗಿದೆ.

ಇನ್ನು ನಾನು ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಇಲ್ಲಿದ್ದೇನೆ. ಭಾರತದ ಮೊದಲ ಆಪಲ್ ಸ್ಟೋರ್‌ನಲ್ಲಿ ಮೊದಲ ಐಫೋನ್ ಪಡೆಯಲು ನಾನು 17 ಗಂಟೆಗಳ ಕಾಲ ಸರದಿಯಲ್ಲಿ ಕಾಯುತ್ತಿದ್ದೇನೆ. ನಾನು ಅಹಮದಾಬಾದ್‌ನಿಂದ ಬಂದಿದ್ದೇನೆ ಎಂದು ಗ್ರಾಹಕರೊಬ್ಬರು ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಯಿಂದ ಐಫೋನ್ ಬಗ್ಗೆ ಜನರಿಗೆ ಯಾವ ರೇಂಜಿಗೆ ಕ್ರೇಜ್ ಇದೆ ಅನ್ನೋದು ಗೊತ್ತಾಗುತ್ತೆ.

 

 

Leave A Reply

Your email address will not be published.