ಪ್ರಧಾನಿ ನರೇಂದ್ರ ಮೋದಿಗೆ ಸ್ಪೆಷಲ್ ಗಿಫ್ಟ್ ನೀಡಿದ ಕ್ರಿಕೆಟ್ ಲೋಕದ ದೇವರು; ಸಚಿನ್ ತೆಂಡೂಲ್ಕರ್ ನೀಡಿದ ಆ ಉಡುಗೊರೆ ಏನು?

 

ಲಕ್ನೋ; ಪ್ರಧಾನಿ ನರೇಂದ್ರ ಮೋದಿಗೆ  ಅವರಿಗೆ ಕ್ರೀಡಾಪಟುಗಳ ಮೇಲೆ ವಿಶೇಷ ಪ್ರೀತಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ. ಇದೀಗ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿದ್ದಾರೆ.

ಹೌದು.. ಶನಿವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಈ ವೇಳೆ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (ನರೇಂದ್ರ ಮೋದಿಯವರಿಗೆ ಭಾರತ ಕ್ರಿಕಟ್ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ

ಈ ಸಂದರ್ಭ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ದಿಲೀಪ್ ಉಪಸ್ಥಿತರಿದ್ದರು. ಜೆರ್ಸಿ ಹಿಂಭಾಗದಲ್ಲಿ ‘ನಮೋ’ ಎಂದು ಬರೆಯಲಾಗಿದೆ. ತೆಂಡೂಲ್ಕರ್ ಮೋದಿಗೆ ಜೆರ್ಸಿ ಉಡುಗೊರೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

 

Leave A Reply

Your email address will not be published.