ನಾನು, ಸುದೀಪ್, ಶಿವಣ್ಣ, ಯಶ್ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ಡಿ ಬಾಸ್ ಸುದೀಪ್ ಹೆಸರು ಪ್ರಸ್ತಾಪ ಮಾಡಿದ್ದ್ಯಾಕೆ??

ಮೈಸೂರು;  ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು ಎಂದಾಕ್ಷಣ ಮೊದಲಿಗೆ ಧ್ವನಿ ಎತ್ತಿದ ನಟ ಡಿ ಬಾಸ್  ದರ್ಶನ್. ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಎಂದಿದ್ದರು. ಇದರ ಬೆನ್ನಲ್ಲೇ ನಟ ಸುದೀಪ್, ಶಿವರಾಜ್ ಕುಮಾರ್, ದುನಿಯಾ ವಿಜಯ್ ಹೀಗೆ ಅನೇಕರು ಪೋಸ್ಟ್ ಮಾಡಿದ್ದರು.

ಇದರ ಬೆನ್ನಲ್ಲೇ ಇದೀಗ ಮೈಸೂರಿನ ಬನ್ನೂರಿನಲ್ಲಿ ಮಾತನಾಡಿರುವ ಛಾಲೆಂಜಿಂಗ್ ಸ್ಟಾರ್ ದರ್ಶನ್  ನಟರು ಹೋರಾಟಕ್ಕೆ ಬರುತ್ತಿಲ್ಲ ಎಂಬ ಕೂಗಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ ಎಂದು ಗರಂ ಆಗಿದ್ದಾರೆ.

ಮೊನ್ನೆ ಬಂದ ತಮಿಳು ಚಿತ್ರದಲ್ಲಿ ಕರ್ನಾಟಕದಲ್ಲೇ ಕೋಟಿ ಕೋಟಿ ಮಾಡಿದವನು ನಿಮಗೆ ಕಾಣ್ತಿಲ್ವ? ಕರ್ನಾಟಕದಲ್ಲೇ ಒಬ್ಬ ವಿತರಕ ತಮಿಳು ಚಿತ್ರದಿಂದ ಕರ್ನಾಟಕದದಲ್ಲೇ 36 ಕೋಟಿ ರೂ. ಮಾಡಿದ. 6 ಕೋಟಿ ಹಾಕಿ 36 ಕೋಟಿ ಮಾಡಿದ. ಅವನಿಗೆ ಯಾಕೆ ನೀವು ಕೇಳಲ್ಲ? ನಾವು ಮಾತ್ರ ನಿಮಗೆ ಕಾಣೋದಾ? ನಿಮಗೆ ಪ್ರಶ್ನೆ ಕೇಳ್ತಾ ಇದ್ದೀನಿ ಹೇಳಿ ಎಂದು ಜನರನ್ನು ದರ್ಶನ್ ಪ್ರಶ್ನಿಸಿದ್ದಾರೆ. ಆ ಮೂಲಕ ಪರಭಾಷಾ ಸಿನಿಮಾಗಳು ಪ್ರೋತ್ಸಾಹಿಸಿರೋದಕ್ಕೂ ಆಕ್ರೋಶ ಹೊರಹಾಕಿದ್ದಾರೆ. ಇಂತಹ ವಿಚಾರಗಳು ಬಂದಾಗ ದೂಷಿಸುತ್ತೀರಾ ಆದ್ರೆ ಅದೇ ಕನ್ನಡ ಸಿನಿಮಾಗಳಿಗೆ ಸರಿಯಾದ ಬೆಂಬಲ ನೀಡಲ್ಲ ಅಂತಾ ಪರೋಕ್ಷವಾಗಿಯೇ ಹೇಳಿದ್ದಾರೆ.ಅಲ್ಲದೇ ಎಲ್ಲೂ ಸುದೀಪ್ ಬಗ್ಗೆ ಮಾತನಾಡ ದರ್ಶನ್ ಇಬ್ಬರ ಮುನಿಸಿನ ಬಳಿಕ ಮೊದಲ ಬಾರಿಗೆ ಅವರ ಹೆಸರು ಪ್ರಸ್ತಾಪ ಮಾಡಿರೋದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಇಬ್ಬರು ಮತ್ತೆ ಒಂದಾಗ್ತಾರ ಅನ್ನೋ ನಿರೀಕ್ಷೆ ಮೂಡಿಸಿದೆ.

 

 

Leave A Reply

Your email address will not be published.