ಐರನ್ ಮ್ಯಾನ್ ವೀಕ್ಷಿಸಲು ಬಿಡುವಂತೆ ಅಪ್ಪನಿಗೆ ಬೆದರಿಕೆ ಪತ್ರ ಬರೆದ 8 ರ ಪೋರ; ತಂದೆ ಬರೆದ ಥ್ರೆಟ್ ಲೆಟರ್ ನಲ್ಲಿ ಏನಿದೆ ಗೊತ್ತಾ?

Viral News: ಟಿವಿ ನೋಡೋದಕ್ಕೆ ಮಕ್ಕಳು ಏನೆಲ್ಲಾ ಸರ್ಕಸ್ ಮಾಡ್ತಾರೆ ಏನೆಲ್ಲಾ ನೆಪ ಹೇಳ್ತಾರೆ ಅಂತಾ ಎಲ್ಲರಿಗೂ ಗೊತ್ತೇ ಇದೆ. ಆದರೆ ಇಲ್ಲೊಬ್ಬ ಅವುಗಳಿಗಿಂತ ಎಲ್ಲಾ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.

8 ವರ್ಷದ ಪೋರನೊಬ್ಬ ತನ್ನ ತಂದೆ ಐರನ್ ಮ್ಯಾನ್ ನೋಡಲು ಅವಕಾಶ ನೀಡುವಂತೆ ಪತ್ರ ಬರೆದಿದ್ದಾನೆ. ಅದು ಸಾಮಾನ್ಯ ಪತ್ರವಲ್ಲ ಬೆದರಿಕೆ ಪತ್ರ. ಲೇಖಕ ಮತ್ತು ದಿ ಬ್ಯಾಬಿಲೋನ್ ಬೀ ಎಂಬ ವಿಡಂಬನಾತ್ಮಕ ವೆಬ್‌ಸೈಟ್‌ನ ವ್ಯವಸ್ಥಾಪಕ ಸಂಪಾದಕ ಜೋಯಲ್ ಬೆರ್ರಿ ಅವರು ಈ ಮುದ್ದಾದ ಬೆದರಿಕೆ ಪತ್ರವನ್ನು X ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಾಲಿಶ ಕೈಬರಹ ಮತ್ತು ತಪ್ಪಾದ ಪದಗಳನ್ನು ಹೊಂದಿರುವ ಟಿಪ್ಪಣಿಯನ್ನು ಅವರ ಎಂಟು ವರ್ಷದ ಮಗು ಬರೆದಿದೆ. ಅದರಲ್ಲಿ, ‘ಜೋಯಲ್ ಬೆರ್ರಿ ಎರ್ಜೆಂಟ್ ಮೇಲ್ ಓಪನ್ ಎಮೆಡಿಟ್ಲಿ. ಆತ್ಮೀಯ ಜೋಯಲ್ ಬೆರ್ರಿ, ನಿಮ್ಮ ಮಕ್ಕಳಿಗಾಗಿ ನೀವು ಇಂದು ರಾತ್ರಿ ಐರನ್ ಮ್ಯಾನ್ ಅನ್ನು ವೀಕ್ಷಿಸಲು ಅವರಿಗೆ ಅವಕಾಶ ನೀಡಬೇಕು ,ಇಲ್ಲ ಅಂದರೆ ನೀವು ಕೊಲ್ಲಲ್ಪಡುತ್ತೀರಿ. ಇಂದ: ಗೋವರ್ಮೆಟ್’.ಎಂದು ಮುದ್ದು ಮುದ್ದಾಗಿ ಬರೆಯಲಾಗಿದೆ.

https://twitter.com/JoelWBerry/status/1705580818855248308

ಈ ಕಪೋಲಕಲ್ಪಿತ ಬೆದರಿಕೆಯನ್ನು ಹಂಚಿಕೊಳ್ಳುವಾಗ, ಬೆರ್ರಿ ಬರೆದಿದ್ದಾರೆ, ‘ನನ್ನ 8 ವರ್ಷದ ಮಗುವಿನಂತೆ ಅನುಮಾನಾಸ್ಪದವಾಗಿ ಕಾಣುವ ಮೇಲ್‌ಮ್ಯಾನ್ ಇದನ್ನು ಇಂದು ಬೆಳಿಗ್ಗೆ ನನ್ನ ಮೇಲ್‌ಬಾಕ್ಸ್‌ನಲ್ಲಿ ಇರಿಸಿದ್ದಾರೆ’. ನಂತರದ ಟ್ವೀಟ್‌ನಲ್ಲಿ ಅವರು ಬರೆದಿದ್ದಾರೆ, ‘ಅವರು ಅದನ್ನು ವೀಕ್ಷಿಸಲು ಬಿಡಬೇಕು.ಇಲ್ಲ ಅಂದರೆ ಈ ಮನೆಯಲ್ಲಿ ಕಾನೂನುಬಾಹಿರ ಸರ್ಕಾರದ ಆದೇಶಗಳನ್ನು ನಾವು ಹೇಗೆ ಪಾಲಿಸುವುದಿಲ್ಲ ಎಂಬುದರ ಕುರಿತು ಅವರಿಗೆ ಪ್ರಮುಖ ಪಾಠವನ್ನು ಕಲಿಸುತ್ತೇವೆ’. ಎಂದು ಬರೆದಿದ್ದಾರೆ.ಪತ್ರದ ಈ ಚಿತ್ರವು 81,000 ಕ್ಕೂ ಹೆಚ್ಚು ಲೈಕ್ ಪಡೆದಿದೆ

Leave A Reply

Your email address will not be published.