ಮೈಸೂರಿನಲ್ಲಿ ಕಲಬೆರಕೆ ಜೇನು ತುಪ್ಪ ಮಾರಾಟ ದಂಧೆ;ಫ್ಯೂರ್ ಹನಿ ಹೆಸರಲ್ಲಿ ಹೇಗೆ ಯಾವಾರಿಸ್ತಾರೆ ಗೊತ್ತಾ

ಮೈಸೂರು; ಜೇನು ಹನಿ ವ್ಯಾಪಾರ ದಂಧೆ ಎಗ್ಗಿಲದೇ ನಡೆಯುತ್ತಿದೆ. ಫ್ರೆಶ್ ಜೇನು ಮಾರಾಟದ ನೆಪದಲ್ಲಿ ಕಲಬೆರಕೆ ಜೇನು ಹನಿ ಮಾರಾಟ ದಂಧೆ ಪತ್ತೆಯಾಗಿದ್ದು, ಸಾರ್ವಜನಿಕರೇ ಅದನ್ನು ಹಿಡಿದು ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಶಕ್ತಿ ನಗರದಲ್ಲಿ ಜನರಿಗೆ ಸಿಹಿ ಮಾತುಗಳನ್ನಾಡಿ, ಸಿಹಿಯ ಹೆಸರಿನಲ್ಲಿ ಮೋಸ ಮಾಡುವ ಗ್ಯಾಂಗ್’ನ್ನು ಸ್ಥಳೀಯರು ಹಿಡಿದಿದ್ದಾರೆ. ಸಿಹಿ ಜೇನು ಮಾರಾಟಗಾರರು ಜನರಿಗೆ ಮೋಸ ಮಾಡುವ ವಿಧಾನವೇ ಬಹಳಷ್ಟು ತಂತ್ರಗಾರಿಕೆಯಿಂದ ಕೂಡಿದ್ದು, ಜನಸಾಮಾನ್ಯರು ಬಹು ಬೇಗ ಮೋಸ ಹೋಗುತ್ತಿದ್ದಾರೆ.

ಮೊದಲಿಗೆ ಈ ಗ್ಯಾಂಗ್ ಯಾವುದೋ ಒಂದು ಮರದ ಫ್ರೆಶ್ ಜೇನು ತೆಗೆದು, ಒಂದು ಸಣ್ಣ ಪೀಸ್ ನೀಡುತ್ತದೆ. ಇನ್ನೂ ಹಿಂಡದ ಆ ಜೇನು ಕೊಟ್ಟು ಆ ಮನೆಯ ಮಾಲೀಕನ ವಿಶ್ವಾಸ ಗಿಟ್ಟಿಸುತ್ತಾರೆ. ಮನೆಯ ಮಾಲಿಕನಿಗೆ ಒರಿಜಿನಲ್ ಜೇನು ಕೊಟ್ಟ ಕಾರಣದಿಂದ, ಮಾಲೀಕ ಜೇನು ಕೊಳ್ಳಲು ಆತುರ  ತೋರುತ್ತಾನೆ. ಬನ್ನಿ, ಇಲ್ಲೇ ವಾಹನದಲ್ಲಿ ಬಜೆಟ್ಟಿನಲ್ಲಿ ಜೇನು ಇದೆ, ಬಜೆಟ್ಟಿನಲ್ಲಿ ಕೊಡುತ್ತೇವೆ ಅನ್ನುತ್ತಾರೆ. ಇಷ್ಟು ತಾಜಾ ಆಗಿರುವ ಜೇನು ಅದು ಕಡಿಮೆ ಬೆಲೆಯಲ್ಲಿ ಅಂದಾಗ ಯಾರು ತಾನೇ ಮಾರು ಹೋಗಲ್ಲ ? ತಕ್ಷಣ ಅಲ್ಲಿಗೆ ಮನೆಯ ಹುಡುಗರನ್ನು ಕಳಿಸಿ ಕೊಡುತ್ತಾನೆ ಮನೆಯ ಮಾಲೀಕ.

ಅಲ್ಲಿ ಅದಾಗಲೇ ಒಂದು ಆಟೋ ನಿಲ್ಲಿಸಿದ್ದು, ಅಲ್ಲಿ ಕಲಬೆರಕೆ ಜೇನು ರೆಡಿ ಇರುತ್ತದೆ. ಎಲ್ಲವೂ ಒಂದೇ ತರಹದ, ಒಂದೇ ಅಳತೆಯ ಬಕೆಟ್ಟುಗಳಲ್ಲಿ ಸಮನಾಗಿ ಜೇನು ಭರ್ತಿ ಮಾಡಿ ನಾಲ್ಕು ಐದು ಬkzಟ್ಟಿನಲ್ಲಿ ಇಟ್ಟಿರುತ್ತಾರೆ. ನಿಮಗೆ ತೋರಿಸೋದೇ ಒಂದು ಬಕೆಟ್, ನೀವು ಕೊಳ್ಳುವಾಗ ನಿಮ್ಮ ಅರಿವಿಗೆ ಬಾರದಂತೆ ಬಕೆಟ್ ಬದಲಾಗುತ್ತದೆ. ಮನೆಗೆ ತಂದು ಬಳಸಿದರೆ, ಅದೂ ಮಕ್ಕಳಿಗೆ ಕೊಟ್ಟರೆ ಆರೋಗ್ಯದ ಕಥೆ ಎಲ್ಲಿಗೆ ಬರಬಹುದು ನೀವೇ ಊಹಿಸಿಕೊಳ್ಳಿ.

ಇಂತಹ 5 ಜನರ ತಂಡವನ್ನು ಆಟೋ ಸಮೇತ ಜನರು ನಿನ್ನೆ ಹಿಡಿದಿದ್ದಾರೆ. ಇಂತಹಾ ಮೋಸಗಾರರು ಬಗ್ಗೆ ಜನರು ಎಚ್ಚರ ವಹಿಸಬೇಕಾಗಿದೆ. ಈ ಬಗ್ಗೆ ಆಹಾರ ಇಲಾಖೆ, ನಗರಪಾಲಿಕೆ ಮತ್ತು ಪೋಲಿಸ್ ಇಲಾಖೆ ಕೂಡಾ ಗಮನಿಸಬೇಕಾಗಿ ವಿನಂತಿ. ಈಗ ಈ ಕಲಬೆರಕೆ ದಂಧೆ ಇಡೀ ಮೈಸೂರು ಭಾಗದಲ್ಲಿ ನಡೆಯುತ್ತಿದೆ. ದೂರದ ಊರಿನ ರಾಜಸ್ಥಾನದವರಿಂದ ಮೈಸೂರಿಗರು ಮೋಸ ಹೋಗುತ್ತಿದ್ದಾರೆ. ಈ ರೀತಿ. ಆಟೋದಲ್ಲಿ  ಬಕೆಟ್ ಗಟ್ಟಲೆ ಜೇನು ಮಾರಾಟ ಕಂಡು ಬಂದ ಮಾಹಿತಿ ದೊರೆತ ತಕ್ಷಣ ಪೋಲಿಸ್ ಇಲಾಖೆಗೆ ಮಾಹಿತಿ ಕೊಡಿ ಎಂದು ಊರವರು ಕೋರಿದ್ದಾರೆ. ಇಂತಹಾ ಕಲಬೆರಕೆ ಕೇವಲ ಜೇನಿಗೆ ಮಾತ್ರ ಸೀಮಿತ ಆಗಿಲ್ಲ. ಬೆಣ್ಣೆ, ತುಪ್ಪ, ತೆಂಗಿನ ಎಣ್ಣೆ ಕೊನೆಗೆ ಮೊಟ್ಟೆಗೆ ಕೂಡಾ ಕಲಬೆರಕೆ ವ್ಯಾಪಿಸಿದೆ. ಎಚ್ಚರ ಗ್ರಾಹಕ, ಎಚ್ಚರ !!

Leave A Reply

Your email address will not be published.