ಪೊಲೀಸರಿಗೆ ಸುಮ್ ಸುಮ್ನೆ ಬೈಯ್ಯೋ ಮುಂಚೆ ಈ ನ್ಯೂಸ್ ಓದಿ; ಈ ಸುದ್ದಿ ಓದಿದ್ಮೇಲೆ ಪೊಲೀಸರ ಬಗೆಗಿಗನ ನಿಮ್ಮ ಅಭಿಪ್ರಾಯ ಖಂಡಿತಾ ಬದಲಾಗುತ್ತೆ…

Must Read story

ಬೆಂಗಳೂರು; ಪೊಲೀಸರು ಅಂದ್ರೆ ಕೆಲವರಿಗೆ ಅದ್ಯಾಕೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಕೋಪ ನೆತ್ತಿಗೇರುತ್ತೆ. ಆದರೆ ನಿಜಕ್ಕೂ ಪೊಲೀಸರ ಕೆಲಸ ಎಷ್ಟು ಕಷ್ಟದ್ದು ಅವರು ಎಷ್ಟೆಲ್ಲಾ ಸವಾಲುಗಳ ಮಧ್ಯೆ ಕೆಲಸ ಮಾಡ್ಬೇಕಾಗುತ್ತೆ ಅನ್ನೋದಕ್ಕೆ ಈ ಸುದ್ದಿಯೇ ನೈಜ ಸಾಕ್ಷಿ.ಅದರಲ್ಲೂ ಬಂದ್ , ಪ್ರತಿಭಟನೆ, ಹೋರಾಟ ಇಂತಹ ಸಂದರ್ಭಗಳಲ್ಲಿ ಅಂತೂ ಅವರ ಅವರ ಪಾಡು ನಾಯಿ ಪಾಡು. ಬೆಂಗಳೂರಿನಲ್ಲಿ ಇವತ್ತು ಇದಕ್ಕೊಂದು ನೈಜ ನಿದರ್ಶನ ಸಿಕ್ಕಿದೆ.

ಕಾವೇರಿ ವಿಚಾರದಲ್ಲಿ ಇಂದು ಬೆಂಗಳೂರಿನಲ್ಲಿ ಬಂದ್ (Banglore Bundh)ಗೆ ಕರೆ ಕೊಡಲಾಗಿದೆ. ಈ ಹಿನ್ನೆಲೆ ಸಾವಿರಾರು ಪೊಲೀಸರನ್ನು ನಗರ ಅಲ್ಲಲ್ಲಿ ನಿಯೋಜನೆ ಮಾಡಲಾಗಿದೆ. ಇನ್ನು ಬೆಂಗಳೂರು ಯಶವಂತಪುರ( Yashwanthpura)  ಟ್ರಾಫಿಕ್ (Traffic) ಪೊಲೀಸರು ಕೂಡ ಎಂದಿನಂತೆ ಬೆಳಗ್ಗಿನ ಜಾವವೇ ಬಂದು ಡ್ಯೂಟಿಗೆಹಾಜರಾಗಿದ್ರು. ಆದರೆ ಕರ್ತವ್ಯದಲ್ಲಿದ್ದ ಈ ಪೊಲೀಸ(Police)ರಿಗೆ ಬ್ರೇಕ್ ಫಾಸ್ಟ್ ಅಂತು ಖುಷಿಯಲ್ಲಿದ್ರು. ಹಸಿವು ತಡೆಯಲಾಗದೇ ಇನ್ನೇನು ತಂದ ತಿಂಡಿ ತಿನ್ಬೇಕು ಅಂತಾ ಸಂಚಾರಿ ಪೊಲೀಸರೊಬ್ಬರು ತಿಂಡಿಯ ಪೊಟ್ಟಣ ಓಪನ್ ಮಾಡುತ್ತಿದ್ದಂತೆ ಶಾಕ್ ಕಾದಿತ್ತು. ತಂದ ಆಹಾರದಲ್ಲಿತ್ತು ಸತ್ತ ಇಲಿ. ನೋಡಿ ನಿದ್ದೆ ಬಿಟ್ಟು, ಅನ್ನ ಆಹಾರ ಬಿಟ್ಟು ಹಗಲು ರಾತ್ರಿ ಕೆಲಸ ಮಾಡೋ ನಮ್ಮ ರಾಜ್ಯದ ಪೊಲೀಸರಿಗೆ ಕೊಡೋ ಸವಲತ್ತು ಹೇಗಿದೆ. ಆಹಾರದ ಗುಣಮಟ್ಟ ಹೇಗಿದೆ ಅಂತಾ. ನಿಜಕ್ಕೂ ಅವರ ಸ್ಥಿತಿ ನೋಡಿದ್ರೆ ಕಣ್ಣೀರು ಬರುತ್ತೆ. ಸುಮ್ ಸುಮ್ನೆ ಅವರನ್ನು ಬಯ್ಯೋ ಮೊದಲು ಅವರ ಪರಿಸ್ಥಿತಿ ನಾವು ಅರ್ಥ ಮಾಡಿಕೊಳ್ಳಬೇಕು.

ಇನ್ನು ಈ ವಿಚಾರ ಗೊತ್ತಾಗುತ್ತಿದ್ದಂತೆ ಸಂಚಾರಿ ಕಮಿಷನರ್ ಎಂ ಎನ್ ಅನುಚೇತ್ ಗರಂ ಆಗಿದ್ದಾರೆ. ಊಟ ಸಪ್ಲೈ ಮಾಡಿದ ಹೊಟೇಲ್ ನವರ ವಿರುದ್ಧ ಕ್ರಿಮಿನಲ್ ಕೇಸ ದಾಖಲಿಸಿದ್ದಾರೆ. ಅಲ್ಲದೇ ಯಶವಂತಪುರ ಸಂಚಾರ ಮತ್ತು ಟ್ರಾಫಿಕ್  ಇನ್ಸ್ಪೆಕ್ಟರ್ ಗಳಿಗೆ ನೋಟೀಸ್ ಕೊಟ್ಟಿದ್ದಾರೆ. ಅಶೋಕ್ ಟಿಫಿನ್ ಸೆಂಟರ್ ನಿಂದ ಒಟ್ಟು 180 ರೈಸ್ ಬಾತ್ ಆರ್ಡರ್ ಮಾಡಲಾಗಿತ್ತು. ಆದರೆ ರೈಸ್ ಬಾತ್ ನಲ್ಲಿ ಇಲಿ ಪತ್ತೆಯಾಗಿದೆ.

ಇನ್ನು ಎರಡು ಹೊತ್ತಿನ ಊಟಕ್ಕೆ 200 ರೂಪಾಯಿ  ಸರ್ಕಾರ ಕೊಡುತ್ತೆ.ಗುಣಮಟ್ಟದ ಊಟ ಯಾಕ್ ಕೊಟ್ಟಿಲ್ಲ ಎಂದು ಅನುಚೇತ್ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.ಸದ್ಯ ಅದೃಷ್ಟವಶಾತ್ ಯಾರೂ ಕಳಪೆ ಊಟ ಸೇವಿಸಿಲ್ಲ.ಒಂದು ವೇಳೆ ಇಲಿ ಇದ್ದ ಊಟ ಸೇವಿಸಿದ್ರೆ ಅನಾಹುತ ಆಗೋ ಸಾಧ್ಯತೆ ಇತ್ತು ಎಂದು ಅವರು ಹೇಳಿದ್ದಾರೆ.

ನಿಜಕ್ಕೂ ಪೊಲೀಸರ ಕರ್ತವ್ಯಕ್ಕೆ ಹ್ಯಾಟ್ಯಾಫ್ ಹೇಳಲೇ ಬೇಕು. ಒಮ್ಮೊಮ್ಮೆ ಅವರು ಪರಿಸ್ಥಿತಿಗಳ ಕೈಗೊಂಬೆಗಳಾದಾಗ ಅವರು ಅಸಹಾಯಕರೇ. ಇನ್ನಾದರೂ ಕೆಲವು ಸಂದರ್ಭದಲ್ಲಿ ಅವರನ್ನು ಸುಮ್ಮನೆ ಬೈಯೋ ಮೊದಲು ಪರಿಸ್ಥಿತಿ ಅರಿತುಕೊಳ್ಳಬೇಕು.

Leave A Reply

Your email address will not be published.