Bangalore: ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಬಗ್ಗೆ ಬಂದಿದೆ ಬಿಗ್ ಅಪ್ಡೇಟ್: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಿರ್ಧಾರ !

Bangalore Karnataka bandh Big update about holidays for schools and colleges tomorrow

ಬೆಂಗಳೂರು, ಸೆ 28: ನಾಳೆ ಸೆಪ್ಟಂಬರ್ 29 ರಂದು ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳಿಗೆ ರಜೆ ಇದೆಯಾ ಇಲ್ಲವೇ ಎನ್ನುವ ಗೊಬ್ಬರದಲ್ಲಿದ್ದಾರೆ ವಿದ್ಯಾರ್ಥಿಗಳು ಮತ್ತು ಪೋಷಕರು. ಆದ್ರೆ ಇಲ್ಲಿಯತನಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ಇದೀಗ ಹೊಸ ಅಪ್ಡೇಟ್ ಬಂದಿದ್ದು ನಾಳೆ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಶಿಕ್ಷಣ ಇಲಾಖೆ ಆಯಾ ಜಿಲ್ಲಾಧಿಕಾರಿಗೆ ನೀಡಿದೆ. ಈ ಕುರಿತು ಸೂಚನೆ ನೀಡಿರುವ ಶಿಕ್ಷಣ ಇಲಾಖೆ, ಪರಿಸ್ಥಿತಿಯನ್ನು ಗಮನಿಸಿಕೊಂಡು ಜಿಲ್ಲಾಧಿಕಾರಿಗಳು ರಜೆ ನೀಡಬಹುದು ಎಂದಿದೆ.

ಇನ್ನು ಆಯಾ ಜಿಲ್ಲಾಧಿಕಾರಿಗಳು ರಜೆ ನೀಡಬೇಕೆಂದು ನಿರ್ಧಾರ ತೆಗೆದುಕೊಳ್ಳುವಂತೆ ಖಾಸಗಿ ಶಾಲೆ ಸಂಘಟನೆಗಳು ಮನವಿ ಮಾಡಿವೆ. ನಾಳಿನ ಕಾವೇರಿ ಹೋರಾಟಕ್ಕೆ ಬೆಂಬಲವಾಗಿ ಕರೆಯಲಾಗಿರುವ ಕರ್ನಾಟಕ ಬಂದ್ ಗೆ ಖಾಸಗಿ ಶಾಲೆಗಳ ಒಕ್ಕೂಟ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಶಾಲೆಗಳಿಗೆ ರಜೆ ನೀಡುವ ನಿರ್ಧಾರವನ್ನು ಆಯಾ ಶಾಲಾ ಆಡಳಿತ ಮಂಡಳಿಗೆ ಒಕ್ಕೂಟ ನೀಡಿದೆ. ಜೊತೆಗೆ ಜಿಲ್ಲಾಧಿಕಾರಿಗಳು ನಾಳೆ ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಬೇಕೆಂದು ಖಾಸಗಿ ಶಾಲಾ ಕಾಲೇಜು ಒಕ್ಕೂಟ ಅಗ್ರಹಿಸಿದೆ.

ಕರ್ನಾಟಕದಲ್ಲಿ ಮಳೆ ಕೊರತೆಯ ಹಿನ್ನೆಲೆ ಕಾವೇರಿ ಬರಿದಾಗಿದೆ. ಹಾಗಾಗಿ ಈ ಸಲ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಆದರೂ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ. ಇದರ ವಿರುದ್ಧ ಕಾವೇರಿಗಾಗಿ ಕರುನಾಡು ಎದ್ದು ನಿಂತಿದ್ದು, ನಾಳೆ ಶುಕ್ರವಾರದ ಕರ್ನಾಟಕ ಬಂದ್ ಗೆ 1900 ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಕಾರ್ಮಿಕ ಸಂಘಟನೆಗಳು ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಕಂಪ್ಲೀಟ್ ಬಂದ್ ಮಾಡಲು ನಿರ್ಧರಿಸಿವೆ.

Leave A Reply

Your email address will not be published.