Karnataka Bandh: ನಾಳೆ ಕರ್ನಾಟಕ ಬಂದ್ ಇದ್ದರೂ ಅದೊಂದು ಸರ್ವಿಸ್ ನಾಳೆ ಇದ್ದೇ ಇರುತ್ತೆ ಸರ್ಕಾರದ ಘೋಷಣೆ !

Latest news Big update about tomorrow's Karnataka Bandh

Karnataka Bandh: ನಾಳೆಯ ಕರ್ನಾಟಕ ಬಂದ್ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ನಾಳೆ ಕರ್ನಾಟಕ ಬಂದ್‌ (Karnataka Bandh) ಇದ್ದರೂ ಬಸ್‌ಗಳ ಸಂಚಾರ ಇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ತಿಳಿಸಿದ್ದಾರೆ.

ಅವರು ಇಂದು ಮಾತನಾಡಿ ಕರ್ನಾಟಕದ ಎಲ್ಲಾ ಭಾಗಗಳಲ್ಲಿ, ವಿಮಾನ ನಿಲ್ದಾಣ (Airport) ಸೇರಿದಂತೆ ಬಸ್ ಸಂಚಾರ ಇರಲಿದೆ. ಆದರೆ ಎದುರಿಗಿಂತ ಕಡಿಮೆ ಬಸ್ಸುಗಳು ಸಚಿವರು ಹೇಳಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಸ್ ನಿರ್ವಹಣೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಆ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗ ರೆಡ್ಡಿಯವರು ಮಾತನಾಡಿ, ‘ಬಂದ್ ಮಾಡುವವರು, ಪ್ರತಿಭಟನಾಕಾರರು ಶಾಂತಿಯುತವಾಗಿ ಬಂದ್ ಮಾಡಲಿ. ಇವತ್ತಿನ ಕಾವೇರಿ ಸಮಸ್ಯೆಗೆ ಬಿಜೆಪಿಯೇ ಕಾರಣ. ಪ್ರಧಾನಿ ನರೇಂದ್ರ ಮೋದಿ (Narendra Modi) ಸಮಸ್ಯೆ ಪರಿಹಾರ ಮಾಡಲು ಮುಂದಾಗಬೇಕು’ ಎಂದು ರಾಮಲಿಂಗಾ ರೆಡ್ಡಿ ಆಗ್ರಹಿಸಿದರು.

ಬಿಎಂಟಿಸಿ ನೌಕರರ ಸಂಘ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಬೆಂಗಳೂರು ಬಂದ್‌ಗೆ ಬೆಂಬಲ ಕೊಟ್ಟಿದ್ದರೂ ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿದಿದ್ದವು. ಹೀಗಾಗಿ ಯಾವುದೇ ಗೊಂದಲ ಆಗದೇ ಇರಲು ನಾಳಿನ ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಲು ಬಿಎಂಟಿಸಿ ನೌಕರರ ಸಂಘ ಮುಂದಾಗಿದೆ.

Leave A Reply

Your email address will not be published.