BIG BOSS ಗೆ ಒಂದು ದೊಡ್ಡ ಬ್ರಾಂಡೆಡ್ ನಾಯಿ ಎಂಟ್ರಿ: ದಿನಾಂಕ ಸಮಯ ನಿಗದಿ, ಇದು ಯಾವೂರ್ ನಾಯಿ ಸ್ವಾಮಿ ?!

Sandalwood news entertainment 777 Charlie fame dog Charlie enter to Bigg boss season 10 house

Bigg boss season 10 : ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಲು ದಿನಗಳಲ್ಲಿ ಆರಂಭವಾಗಿದೆ. ಎಷ್ಟೇ ಟೀಕೆಗಳು ಕೇಳಿ ಬಂದರೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ನೋಡುವುದಕ್ಕೆ ಅದರದೇ ಆದ ನೋಡುಗರಿದ್ದಾರೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕಂಡವರ ಮನೆಗೆ ಒಂದು ಕಣ್ಣು ಇಣುಕು ಹಾಕುವ ಬುದ್ಧಿ ಇರುತ್ತದೆಯಂತೆ. ಇನ್ನೊಬ್ಬರ ಮನೆಗೆ ಇಣುಕಿ ಅಲ್ಲಿ ನಡೆಯುವ ಪ್ರೀತಿ, ಜಗಳ, ಭಾವ-ಬಂಧ, ರೋಷ -ಕಣ್ಣೀರು ಮುಂತಾದವುಗಳನ್ನು ದೂರದಿಂದಲೇ ನೋಡುವ ಕುತೂಹಲಿಗಳಿಗೆಂದೇ ರೂಪಿಸಲಾಗಿದೆ ಬಿಗ್ ಬಾಸ್ ಅನ್ನೋ ಈ ಕಾನ್ಸೆಪ್ಟ್.

ಅಂಥವರ ಆಕರ್ಷಣೆಯಾಗಿ ಬಿಗ್ ಬಾಸ್ ಮತ್ತೆ ಕನ್ನಡದಲ್ಲಿ ಬರುತ್ತಿದ್ದು, ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್ ಮಾಡುವ ಮೂಲಕ ವಾಹಿನಿಯು ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ. ಈಗಾಗಲೇ ಬಿಗ್ ಬಾಸ್ ಯಾವಾಗಿಂದ ಶುರುವಾಗುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದೆ. ಈಗ ಪ್ರಸಾರದ ವೇಳೆಯನ್ನೂ ಅದು ಹಂಚಿಕೊಂಡಿದೆ. ಆಶ್ಚರ್ಯದ ಸಂಗತಿ ಎಂದರೆ ಈ ಬಾರಿ ಬಿಗ್ ಬಾಸ್ ಗೆ ದೊಡ್ಡ ನಾಯಿಯೊಂದು ಎಂಟ್ರಿ ಆಗುತ್ತಿದೆ !!!

ಬರುವ ತಿಂಗಳು ಅಕ್ಟೋಬರ್ 8 ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಶೋ(Bigg boss season 10 ), ಮೊದಲ ದಿನ ಸಂಜೆ 6 ಗಂಟೆಗೆ ಇನೋಗ್ರಲ್ ಶೋ ಪ್ರಸಾರವಾಗಲಿದೆ. ಮರುದಿನದಿಂದ ಪ್ರತಿ ದಿನ ರಾತ್ರಿ ಕೈಯಲ್ಲಿ ಅನ್ನದ ಬಟ್ಟಲು ಇಟ್ಟುಕೊಂಡು, ಬಟ್ಟಲು ಕಣ್ಣು ಬಿಟ್ಟುಕೊಂಡು ನೋಡಬಹುದು. ಪ್ರತಿ ರಾತ್ರಿ 9.30 ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ವಾಹಿನಿಯು ರಿಲೀಸ್ ಮಾಡಿದ ಪ್ರೋಮೋದಲ್ಲಿ ತಿಳಿಸಲಾಗಿದೆ. ಇದಕ್ಕಾಗಿಯೇ ವಿಶೇಷ ಪ್ರೋಮೋ ಕೂಡ ರಿಲೀಸ್ ಆಗಿದೆ.

Bigg boss season 10

ಬಿಗ್ ಬಾಸ್ ಶೋನಲ್ಲಿ ಹೊಸ ಸ್ಪರ್ಧಿ
ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಯಾವಾಗ ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದೆ. ವಾಹಿನಿಯ ‘ಅನುಬಂಧ 2023’ ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಪ್ರಥಮ ಬಾರಿಗೆ ಹೋಗುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ವಾಹಿನಿಯಾಗಲಿ, ಬಿಗ್ ಬಾಸ್ ಮನೆ ಪ್ರವೇಶ (Bigg Boss House) ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಸ್ಪರ್ಧಿಗಳು ಯಾರು ಅನ್ನೋದು ಬಿಗ್ ಬಾಸ್ ಶೋ ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಅನ್ನೋದನ್ನು ಇದೀಗ ವಾಹಿನಿ ಹೇಳಿದೆ. ಬಿಗ್ ಬಾಸ್ ಗೆ ದೊಡ್ಡ ನಾಯಿಯೊಂದು ಎಂಟ್ರಿ ಆಗುತ್ತಿದೆ.

ಹೌದು, 777 ಚಾರ್ಲಿ ಕನ್ನಡ ಚಲನಚಿತ್ರದಲ್ಲಿ ನಟಿಸಿದ ನಾಯಿ ಬಿಗ್ ಬಾಸ್ ಸೀಸನ್ 10 ನ ಮೊದಲ ಕಂತೆಸ್ತೆಂಟ್. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋದು ಚಾರ್ಲಿ !! ಅಭಿನಂದನೆಗಳು ಚಾರ್ಲಿ, ಎಂದು ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಚಾರ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಡುತ್ತಿದೆ. ಅಂದಹಾಗೆ, 777 ಚಾರ್ಲಿ (777 charlie) ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಚಾರ್ಲಿ ಕೂಡ ಮನೋಜ್ಞವಾಗಿ ಅಭಿನಯಿಸುವ ಪ್ರೇಕ್ಷಕರ ಮನ ಗೆದ್ದಿತ್ತು.
ಇದೀಗ ದೊಡ್ಡ ನಾಯಿಯೊಂದು ಬಿಗ್ ಬಾಸ್ ಎಂಟ್ರಿ ಆಗುತ್ತಿರುವ ಹಾಗೆ ಉಳಿದ ಸ್ಪರ್ಧಿಗಳಲ್ಲಿ ಆತಂಕ ಶುರುವಾಗಿದೆ. ಒಂದು ವೇಳೆ ಜನರು ಚಾರ್ಲಿಯ ಒಳ್ಳೆಯ ಗುಣ ನೋಡಿ ತಮ್ಮ ಬೆರಳು ಸೋಲುವಷ್ಟು ಎಸ್ಎಂಎಸ್ ಒತ್ತಿದರೆ ಚಾರ್ಲಿ ಸೆವೆನ್ ಬಿಗ್ ಬಾಸ್ 10 ರ ವಿಜೇತ ಆಗೋದು ಪಕ್ಕಾ. ಹಾಗಾದರೆ ಏನು ಗತಿ ? ತಮ್ಮ ಗತಿ ನಾಯಿ ಪಾಡು ಆಗುವುದಂತೂ ಸತ್ಯ ಎನ್ನುವ ಕಳವಳ ಉಳಿದ ಸ್ಪರ್ಧಿಗಳದ್ದು.

Leave A Reply

Your email address will not be published.