A S Ramakrishna murder: ಸುಳ್ಯ ಪ್ರಾಂಶುಪಾಲರ ಸುಪಾರಿ ಮರ್ಡರ್ ಪ್ರಾಂಶುಪಾಲರನ್ನೇ ಕೊಂದು ಹಾಕಿದ ಕುರುಂಜಿ ರೇಣುಕಾ ಪ್ರಸಾದ್ ! ಕೋರ್ಟ್ ತೀರ್ಪಿನಲ್ಲಿ ಏನಿದೆ ?!

Sullia principal A S Ramakrishna murder case matter brother and 6 others convicted

A S Ramakrishna murder: ದಕ್ಷಿಣಕನ್ನಡ; ಸುಳ್ಯ:  ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಎ ಎಸ್‌ ರಾಮಕೃಷ್ಣ  ಕೊಲೆ ಪ್ರಕರಣಕ್ಕೆ (A S Ramakrishna murder) ಸಂಬಂಧಿಸಿದಂತೆ ಕುರುಂಜಿ ವಂಶದ ಕುಡಿ ಡಾ. ರೇಣುಕಾ ಪ್ರಸಾದ್‌ ಸೇರಿ ಆರು ಮಂದಿಗೆ ಹೈಕೋರ್ಟ್ ಬಿಗ್ ಶಾಕ್‌ ನೀಡಿದೆ.

ಪ್ರಕರಣದಲ್ಲಿ ಡಾ. ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ (ಪುತ್ತೂರು ಉಪ ವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ. ಹಾಗಾಗಿ ಡಾ. ರೇಣುಕಾ ಪ್ರಸಾದ್‌ ಜೈಲು ಪಾಲಾಗುವುದು ಪಕ್ಕಾ ಆಗಿದೆ.

ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ. ರೇಣುಕಾ ಪ್ರಸಾದ್‌, ಮನೋಜ್‌ ರೈ, ಎಚ್‌ ಆರ್ ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ ಮತ್ತು ಶಂಕರ ಅವರನ್ನು ಮೃತ ಎ ಎಸ್‌ ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಮಾನಿಸಿದೆ. ಆದರೆ, ಏಳನೇ ಆರೋಪಿಯಾಗಿದ್ದ ಎಚ್‌ ಯು ನಾಗೇಶ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಇದೇ ವೇಳೆ ಮಾನ್ಯ ಮಾಡಿದೆ. ಎಚ್‌ ಯು ನಾಗೇಶ್‌ ಕುಮಾರ್‌ ಮತ್ತೊಮ್ಮೆ ನಿರ್ದೋಷಿ ಎಂದು ಕೋರ್ಟ್ ಘೋಷಿಸಿದೆ. ಅಲ್ಲದೆ, ದೋಷಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ಅಕ್ಟೋಬರ್‌ 5 ರಂದು ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿದೆ.

ಏನಿದು ದುರಾಸೆಯ ಪ್ರಕರಣ?
ಸುಳ್ಯದ ಶಿಲ್ಪಿ ಎಂದು ಕರೆಸಿಕೊಳ್ಳುತ್ತಿರುವ ಪ್ರತಿಷ್ಠಿತ ಕುರುಂಜಿ ವೆಂಕಟರಮಣ ಗೌಡ ಅವರು ಕೆವಿಜಿ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಷನ್‌ ಸ್ಪ್ಲಿಂಟರ್‌ ಇನ್‌ಸ್ಟಿಟ್ಯೂಷನ್ಸ್‌ ಸಂಸ್ಥಾಪಕರಾಗಿದ್ದರು. ಕಷ್ಟದಿಂದ ಮೇಲೆ ಬಂದ ಕುರುಂಜಿ ವೆಂಕಟ್ರಮಣ ಗೌಡರು ತಮ್ಮ ಜೀವಿತಾವಧಿಯಲ್ಲಿ ಒಳ್ಳೆಯ ಹೆಸರು ಮತ್ತು ಅಪಾರ ಪ್ರಮಾಣದ ಆಸ್ತಿಯನ್ನು ಸಂಪಾದಿಸಿದರು. ಶಾಲೆ ಕಾಲೇಜು ಆಸ್ಪತ್ರೆಗಳು ವೈದ್ಯಕೀಯ ಸಂಸ್ಥೆಗಳು ಇತ್ಯಾದಿ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಕುರುಂಜಿ ವೆಂಕಟರಮಣ ಗೌಡರಿಗೆ. ವಿಶೇಷವೆಂದರೆ ಅವರು ಹೆಚ್ಚಿನ ಸಂಪತ್ತನ್ನು ಗಳಿಸಿದ್ದು ತಮ್ಮ ಕೃಷಿ ಉತ್ಪನ್ನದಿಂದಲೇ ಎನ್ನುವುದು ವಿಶೇಷ. ಸರಿ ಸುಮಾರು ಅರ್ಧ ಶತಮಾನಕ್ಕೂ ಹಿಂದೆ ಏಕಕಾಲದಲ್ಲಿ 10,000 ಅಡಿಕೆ ಗಿಡಗಳನ್ನು ನೆಟ್ಟು ಅದರ ಉತ್ಪತ್ತಿಯಲ್ಲಿ ಒಂದೊಂದಾಗಿ ಸಾಧನೆ ಮಾಡಿದವರು ಕುರುಂಜಿ ವೆಂಕಟ್ರಮಣ ಗೌಡರು.

ಸಹಜವಾಗಿ ಅವರಿಗೆ ವಯಸ್ಸಾದ ಮತ್ತು ಅನಾರೋಗ್ಯ ಕಾಡಿದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಅವರು ಹಿರಿಯ ಪುತ್ರ ಕೆ ವಿ ಚಿದಾನಂದ ಮತ್ತು ಕಿರಿಯ ಪುತ್ರ ಡಾಕ್ಟರ್ ರೇಣುಕಾ ಪ್ರಸಾದ್‌ ಅವರಿಗೆ ತಕ್ಕಮಟ್ಟಿಗೆ ಸಮತೋಲನ  ವಿಭಜನೆ ಮಾಡಿಕೊಟ್ಟಿದ್ದರು. ಆದರೆ ಕಿರಿಯ ಪುತ್ರ ಡಾಕ್ಟರ್ ರೇಣುಕಾ ಪ್ರಸಾದ್ ಅವರಿಗೆ ಆಸ್ತಿ ವಿಭಜನೆಯ ಸಂದರ್ಭ ಅಸಮಾಧಾನವಿತ್ತು. ಆಸ್ತಿಯನ್ನು ಸಮನಾಗಿ ವಿತರಿಸಲಾಗಿಲ್ಲ ಎನ್ನುವ ಆಕ್ರೋಶವಿತ್ತು.

ಈ ವೇಳೆ‌ ಕುರುಂಜಿ ಗೌಡರ ಹಿರಿಯ ಪುತ್ರ ಚಿದಾನಂದ ಅವರ ಆಪ್ತ ಎ.ಎಸ್‌ ರಾಮಕೃಷ್ಣ ಭಟ್ ಎಂಬವರು ಕೆವಿಜಿ ಪಾಲಿ ಟೆಕ್ನಿಕ್‌ ಕಾಲೇಜು ಪ್ರಿನ್ಸಿಪಾಲ್ ಕಾರ್ಯ ನಿರ್ವಹಿಸಲು ನೇಮಿಸಲಾಗಿತ್ತು.

ದುರಾಸೆಯಿಂದ ದ್ವೇಷಕ್ಕೆ:

ಆಸ್ತಿ, ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿ ಇತ್ಯಾದಿಯಾಗಿ  ವಿಭಜನೆಯನ್ನು ರಾಮಕೃಷ್ಣ ಅವರ ಸಲಹೆ ಮೇರೆಗೆ ಮಾಡಲಾಗಿದೆ, ರಾಮಕೃಷ್ಣ ಅವರ ಯೋಜನೆ ಮತ್ತು ಸಲಹೆಯ ಮೇರೆಗೆ ಇದೆಲ್ಲಾ ಆಗಿದೆ ಎಂದು ಭಾವಿಸಿದ್ದ ಡಾಕ್ಟರ್ ರೇಣುಕಾ ಪ್ರಸಾದ್ ಗೆ ರಾಮಕೃಷ್ಣ ಭಟ್ ಅವರ ಮೇಲೆ ಅಸಮಾಧಾನವಿತ್ತು. ಅಲ್ಲದೆ, ಚಿದಾನಂದ ಅವರ ಪರವಾಗಿ ಕೆವಿಜಿ ಮೆಡಿಕಲ್‌ ಕಾಲೇಜು ವ್ಯವಹಾರಗಳನ್ನು ಸಹ ರಾಮಕೃಷ್ಣ ಭಟ್ ರು ನೋಡಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ರಾಮಕೃಷ್ಣರವರ ಮೇಲೆ ಡಾಕ್ಟರ್ ರೇಣುಕಾ ಪ್ರಸಾದ್ ರವರು ಕಿಡಿಕಾರಲು ಪ್ರಾರಂಭಿಸಿದರು. ಹಾಗೆ ಮೂಡಿದ ದ್ವೇಷದಿಂದ ರಾಮಕೃಷ್ಣ ಭಟ್ ರ ಕೊಲೆಗೆ ಸುಪಾರಿ ನೀಡಿದ್ದರು.

ಅಂದು ರಾಮಕೃಷ್ಣ ಭಟ್ ರು 2011ರ ಏಪ್ರಿಲ್‌ 28 ರಂದು ಬೆಳಗ್ಗೆ 7.45 ರ ವೇಳೆಯಲ್ಲಿ ಅಂಬಟೆಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್‌ ಥೆರಪಿ ಕ್ಲಿನಿಕ್‌ ರಸ್ತೆಯಲ್ಲಿ ತನ್ನ ಪಾಡಿಗೆ ತಾನು ವಾಕಿಂಗ್ ಹೋಗುತ್ತಿದ್ದರು. ಹಾಗೆ ನಡೆದು ಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ಏಕಾಏಕಿ ದಾಳಿ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದರು. ಈ ಅಮಾಯಕನ ಕೊಲೆ ದೊಡ್ಡ ಸಂಚಲನ ಹುಟ್ಟು ಹಾಕಿತ್ತು. ಪ್ರಕರಣ ಸಂಬಂಧ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಡಾ.‌ರೇಣುಕಾ ಪ್ರಸಾದ್‌ ಮೊದಲ ಆರೋಪಿಯಾಗಿದ್ದು ಒಟ್ಟು 7 ಆರೋಪಿಗಳಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರೆಲ್ಲರನ್ನೂ ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2016ರ ಅಕ್ಟೋಬರ್‌ 21ರಂದು ಆದೇಶಿಸಿತ್ತು.

ಆದರೆ ಈ ಆದೇಶ ಪ್ರಶ್ನಿಸಿ ಸರ್ಕಾರ 2017ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿತ್ತು. ಇದೀಗ ರೇಣುಕಾಪ್ರಸಾದ್‌ ಹಾಗೂ ಇತರೆ ಐವರು ಆರೊಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿರುವ ಹೈಕೋರ್ಟ್‌, ಎಲ್ಲರನ್ನೂ ಕೊಲೆ ಮತ್ತು ಅಪರಾಧಿ ಒಳ ಸಂಚಿನ ಕೃತ್ಯದಲ್ಲಿ ದೋಷಿ ಎಂದು ತೀರ್ಮಾನಿಸಿದೆ. ಶಿಕ್ಷೆಯ ಪ್ರಮಾಣವನ್ನು ಇನ್ನೂ ನಿರ್ಧರಿಸಬೇಕಿದೆ.

ಅಪ್ಪ ಗುರುಜಿ ವೆಂಕಟರಮಣ ಗೌಡರು ಮಾಡಿದ ಕೋಟ್ಯಂತರ ರೂಪಾಯಿ ಆಸ್ತಿ ತನ್ನ ಪಾಲಿಗೆ ಬಂದಿದ್ದರು ಅದರಲ್ಲಿ ಸಂತ್ರಪ್ತಗೊಳ್ಳದೆ ದುರಾಸೆಗೆ ಬಿದ್ದ ಡಾ. ರೇಣುಕಾ ಪ್ರಸಾದ್ ಎಂಬ ವಿದ್ಯಾವಂತ ವ್ಯಕ್ತಿ ಇದೀಗ ಕೊಲೆಗಾರನಾಗಿ ನಿಲ್ಲಬೇಕಾಗಿದೆ. ಅದು ತನ್ನ ಅಣ್ಣನಿಗೆ ಹೆಚ್ಚಿನ ಪ್ರಮಾಣದ ಪಾಲು ಬಂತು ಎನ್ನುವ ದುರಾಸೆ ರೇಣುಕಾ ಪ್ರಸಾದ್ ರಂದು ಈ ರೀತಿ ಹೀನ ಕೃತ್ಯ ಎಸಗುವಂತೆ ಮಾಡಿದೆ. ತಮಗಿರೋ ಒಂದೆರಡು ಎಕರೆ ಭೂಮಿಗಳನ್ನೇ ನಾಲ್ಕೈದು ಜನ ಅಣ್ಣ ತಮ್ಮಂದಿರು ಹಂಚಿಕೊಂಡು ನೆಮ್ಮದಿಯಾಗಿರುವ ಬಡ ಕುಟುಂಬಗಳು ಒಂದೆಡೆ, ಕೋಟ್ಯಂತರ ರೂಪಾಯಿ ಆಸ್ತಿ ಅಪ್ಪನಿಂದ ಬಂದರೂ ಅಷ್ಟಕ್ಕೆ ಸಮಾಧಾನಗೊಳ್ಳದೆ ದುರಾಸೆಗೆ ಬೀಳುವ ಇಂಥವರು – ಬನ್ನಿ ಇನ್ನೊಬ್ಬರ ತಪ್ಪಿನಿಂದ ಪಾಠ ಕಲಿಯೋಣ !

Leave A Reply

Your email address will not be published.