ಉಡುಪಿ;ಕುಂದಾಪುರದಲ್ಲಿ ದಂಪತಿ ಪಾಲಿಗೆ ಯಮನಾದ ವಿದ್ಯುತ್ ತಂತಿ; ಪತಿಯನ್ನು ರಕ್ಷಿಸಲು ಹೋಗಿ ಉಸಿರು ಚೆಲ್ಲಿದ ಪತ್ನಿ

ಉಡುಪಿ; ವಿದ್ಯುತ್ ತಂತಿ ಸ್ಪರ್ಶಿಸಿ ಗಂಡ ಹೆಂಡತಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಸುಳ್ಸೆ ಭಟ್ರು ಎಂಬವರ ತೋಟದಲ್ಲಿ ನಡೆದಿದೆ. ಮಹಾಬಲ ದೇವಾಡಿಗ (58), ಲಕ್ಷ್ಮೀ ದೇವಾಡಿಗ (48) ಮೃತ ದುರ್ದೈವಿಗಳು.

ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ‌ ಕಳೆದರೂ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಪತ್ನಿ‌ ಲಕ್ಷ್ಮೀ ಅನುಮಾನಗೊಂಡು ಕರಣಿಕರ ಮನೆಗೆ ತೆರಳಿದ್ದಾರೆ. ಈ ವೇಳೆ ಕರಣಿಕರ ಮನೆಗೆ ಬರುವ ಕಾಲುದಾರಿಯಲ್ಲಿ ತುಂಡರಿಸಿದ ವಿದ್ಯುತ್ ತಂತಿ ತಗುಲಿ ಪತಿ ಬಿದ್ದಿರುವುದು ಲಕ್ಷ್ಮೀ ನೋಡಿದ್ದಾರೆ. ತಕ್ಷಣವೇ ಗಂಡನನ್ನು ರಕ್ಷಿಸಲು ಸ್ಥಳೀಯರಲ್ಲಿ ನೆರವಿಗೆ ಬರುವಂತೆ ಕೂಗಿದ್ದಾರೆ. ಸಮೀಪದ‌ ಮನೆಯರು ಬರುವಷ್ಟರಲ್ಲಾಗಲೇ ಮಳೆ ನೀರಿನಿಂದ ಒದ್ದೆಯಾದ ಮರದ ತುಂಡಲ್ಲಿ ರಕ್ಷಣೆಗೆ ಧಾವಿಸಿದ ಪರಿಣಾಮ ಲಕ್ಷ್ಮೀಯವರಿಗೂ ವಿದ್ಯುತ್ ಪ್ರವಹಿಸಿ ಅವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಭೇಟಿ ನೀಡಿದ್ದಾರೆ. ವಿದ್ಯುತ್ ತಂತಿ ಹಳೆಯದಾದರೂ ಬದಲಿಸದೇ ಇರುವ ಮೆಸ್ಕಾಂ ಅವರ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಮಳೆಗಾಲ ನಡೆದಾಡುವಾಗ ಕೊಂಚ ಎಚ್ಚರ ವಹಿಸದಿದ್ದರೆ ಎಂತಹ ಅನಾಹುತಗಳಾಗುತ್ತವೆ ಅನ್ನೋದಕ್ಕೆ ಘಟನೆಯೇ ಸಾಶ್ರಿ.

 

Leave A Reply

Your email address will not be published.