ಉಡುಪಿ; ಕೋವಿಯಿಂದ ಶೂಟ್ ಮಾಡಿ 4 ದನಗಳನ್ನು ಕೊಂದ ಪಾಪಿ

ಉಡುಪಿ: ಪಾಪಿಯೊಬ್ಬ 4 ದನಗಳನ್ನು ಒಂದು ತಿಂಗಳ ಅಂತರದಲ್ಲಿ  ಕೋವಿಯಿಂದ ಶೂಟ್ ಮಾಡಿ ಕೊದ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಇನ್ನೂ  , 10-15 ದನಗಳನ್ನು ಈ ಪಾಪಿ ಗಾಯಗೊಳಿಸಿದ್ದು ಅವೆಲ್ಲಾ ಸಾವು ಬದುಕಿನ ನಡುವೆ ನರಳಾಡುತ್ತಿವೆ.

ಕೊಲ್ಲೂರು ಸಮೀಪದ ಬೆಳ್ಳಾಲ ಗ್ರಾಮದ ಅಂಗಡಿಜೆಡ್ಡುವಿನ ಗುಲಾಬಿ ಹಾಗೂ  ಇತರರ ದನಗಳಿಗೆ ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಸೆ.23ರಂದು ಕೋವಿಯಿಂದ ಶೂಟ್ ಮಾಡಿದ್ದಾನೆ. ಇದರ ಪರಿಣಾಮ ಗಾಯಗೊಂಡ ದನಗಳು ಸಾವನಪ್ಪಿವೆ.

ಇನ್ನು ಇದನ್ನು ಪ್ರಶ್ನಿಸಿದ ಗುಲಾಬಿ ಅವರಿಗೆ ಆರೋಪಿ ಅವಾಚ್ಯವಾಗಿ ಬೈದು ಕೋವಿಯಿಂದ ಹೊಡೆದು ಶೂಟ್ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಸುಮಾರು ಒಂದು ತಿಂಗಳಿನಿಂದ ಅಂಗಡಿಜೆಡ್ಡು ಪರಿಸರದಲ್ಲಿ 4 ದನಗಳು ಸತ್ತಿದ್ದು, 10-15 ದನಗಳು ಗಾಯಗೊಂಡು ಹುಳವಾಗಿದೆ. ಇದಕ್ಕೆಲ್ಲಾ ನರಸಿಂಹ ಎಂಬಾತನೇ ಕಾರಣವಾಗಿದ್ದು, ಈತನಲ್ಲಿ ಸ್ಥಳೀಯರು ವಿಚಾರಿಸಿದಾಗ ಈಗಾಗಲೇ 4 ದನವನ್ನು ಕೊಂದ್ದಿದ್ದು 10-15 ದನಗಳಿಗೆ ಕೋವಿಯಿಂದ ಹೊಡೆದಿದ್ದೇನೆ. ಇನ್ನು ಮುಂದೆ ದನಗಳನ್ನು ಜಾಗ್ರತೆ ಮಾಡದೇ ಇದ್ದರೆ ದನಕ್ಕೆ ಆದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಗುಲಾಬಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

 

Leave A Reply

Your email address will not be published.