ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಇಯರ್ ಫೋನ್, ನಟ್, ಬೋಲ್ಟ್; ಎಕ್ಸ್-ರೇ ರಿಪೋರ್ಟ್ ನೋಡಿ ಸುಸ್ತಾದ ವೈದ್ಯರು

ಪಂಜಾಬ್;  ಹೊಟ್ಟೆಯಲ್ಲಿ ಯಾವ್ಯಾವುದೋ ಸಮಸ್ಯೆ ಇದ್ದಾಗ ಅದನ್ನು ವೈದ್ಯರು ಅದನ್ನು ಗುಣಪಡಿಸದ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ.ಆದರೆ ಈ ಸಮಸ್ಯೆ ನೋಡಿದ್ರೆ ನೀವು ದಂಗಾಗೋದು ಗ್ಯಾರಂಟಿ. ವೈದ್ಯರೇ ರೋಗಿಯ ಪರಿಸ್ಥಿತಿ ನೋಡಿ ಸುಸ್ತಾಗಿ ಹೋಗಿದ್ದಾರೆ.

ಅಂದ್ಹಾಗೆ ಇಂತಹದ್ದೊಂದು ಘಟನೆ ನಡೆದಿರೋದು ಪಂಜಾಬ್ ನ ಮೊಗಾ ಪಟ್ಟಣದಲ್ಲಿ. ಇಲ್ಲಿನ ವ್ಯಕ್ತಿಯೊಬ್ಬ ಕಳೆದ ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಈತನಿಗೆ ಸಾಕಷ್ಟು ಔಷಧಿ ಮಾಡಿದರೂ ಅದರಿಂದ ಪ್ರಯೋಜನವಾಗಿರಲಿಲ್ಲ . ಬೇರೆ ದಾರಿ ಕಾಣದೇ ವ್ಯಕ್ತಿ ಮೊಗದಲ್ಲಿರುವ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.ಈ ವೇಳೆ ಎಲ್ಲಾ ವಿಚಾರವನ್ನು ವೈದ್ಯರ ಮುಂದೆ ಹೇಳಿದ್ದಾರೆ.

ಅದರಂತೆ ವೈದ್ಯರು ಎಕ್ಸರೇ ಮಾಡಿದ್ದಾರೆ.ಎಕ್ಸ್-ರೇ ರಿಪೋರ್ಟ್ ನೋಡಿ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಎಕ್ಸ್-ರೇಯಲ್ಲಿ  ನೋಡಿದಾಗ  ವ್ಯಕ್ತಿಯ ಹೊಟ್ಟೆಯಲ್ಲಿ ಇಯರ್ ಫೋನ್, ನಟ್, ಬೋಲ್ಟ್, ಬೀಗ, ಕೀ ಸೇರಿದಂತೆ 15 ರಿಂದ 20 ವಸ್ತುಗಳು ಹೊಟ್ಟೆಯಲ್ಲಿ ಇರುವುದು ಪತ್ತೆಯಾಗಿದೆ.ಕೂಡಲೇ ಶಸ್ತ್ರ ಚಿಕಿತ್ಸೆಗೆ ತಯಾರಿ ನಡೆಸಿದ ವೈದ್ಯರ ತಂಡ ಸುಮಾರು ಮೂರು ಗಂಟೆಗಳ ಸತತ ಪ್ರಯತ್ನದ ಮೂಲಕ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಸ್ತ್ರ ಚಿಕಿತ್ಸೆ ಬಳಿಕ ಪ್ರತಿಕ್ರಿಯೆ ನೀಡಿದ ಮೆಡಿಸಿಟಿ ನಿರ್ದೇಶಕ ಡಾ ಅಜ್ಮೀರ್ ಕಲ್ರಾ ಅವರು ತಮ್ಮ ವೃತ್ತಿಜೀವನದಲ್ಲಿ ಇದು ಮೊದಲ ಪ್ರಕರಣವಾಗಿದೆ, ಇದುವರೆಗೂ ಈ ರೀತಿಯ ಪ್ರಕರಣ ನಾನು ನೋಡಿಲ್ಲ. ಇದು ನನ್ನ ಜೀವಮಾನದಲ್ಲಿ ನೋಡಿದ ಮೊದಲ ಪ್ರಕರಣವೆಂದು ಹೇಳಿಕೊಂಡಿದ್ದಾರೆ.ಇಷ್ಟೊಂದು ವಸ್ತುಗಳು ವ್ಯಕ್ತಿಯ ಹೊಟ್ಟೆಯೊಳಗೆ ಸೇರಿದ್ದರಿಂದ ನಿರಂತರ ಹೊಟ್ಟೆನೋವು ಕಾಣಿಸಿಕೊಂಡಿದೆ ಆದರೆ ಶಸ್ತ್ರ ಚಿಕಿತ್ಸೆ ನಡೆಸಿ ಹೊಟ್ಟೆಯೊಳಗಿದ್ದ ಎಲ್ಲ ವಸ್ತುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕುಟುಂಬ ಸದಸ್ಯರು ಕಳೆದ ಕೆಲ ಸಮಯದಿಂದ ವ್ಯಕ್ತಿ ಹೊಟ್ಟೆನೋವಿನಿಂದ ರಾತ್ರಿ ನಿದ್ರಿಸುತ್ತಿರಲಿಲ್ಲ ಹೊಟ್ಟೆನೋವು ಜಾಸ್ತಿಯಾಗುತ್ತಿದ್ದಂತೆ ಆಸ್ಪತ್ರೆಗೆ ದಾವಿಸಿರುವುದಾಗಿ ಹೇಳಿದ್ದಾರೆ, ಆದರೆ ಇದೆಲ್ಲದರ ನಡುವೆ ವ್ಯಕ್ತಿಯ ಹೊಟ್ಟೆಯಲ್ಲಿ ಅಷ್ಟೊಂದು ವಸ್ತುಗಳು ಹೇಗೆ ಹೋಗಿವೆ ಎಂಬುದೇ ಎಲ್ಲರಿಗೂ ಯಕ್ಷಪ್ರಶ್ನೆಯಾಗಿದೆ.

Leave A Reply

Your email address will not be published.