ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ ವಿಧಾನಸಭಾ ಸ್ಪೀಕರ್ ರ ಆ ಮಾತು; ಆ ವೀಡಿಯೋದಲ್ಲಿ ಯು ಟಿ ಖಾದರ್ ಹೇಳಿದ್ದೇನು?

Viral video; ಬೆಂಗಳೂರು; ಕರಾವಳಿಯ ಶಾಸಕರಲ್ಲಿ ಸದ್ಯ ಹೆಚ್ಚು ಗಮನ ಸೆಳೆಯುತ್ತಿರುವವರು ವಿಧಾನಸಭಾ ಸ್ಪೀಕರ್, ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕ ಯು ಟಿ ಖಾದರ್. ವಿಧಾನಸಭೆಯಲ್ಲಿ ಅವರು ಕನ್ನಡದಲ್ಲಿ ಮಾತನಾಡುವುದನ್ನು ಟ್ರೋಲ್ ಮಾಡಿದ್ರೂ ಆ ಟ್ರೋಲ್ ಗಳ ಮೂಲಕವೇ ಜನರಿಂದ ಇನ್ನಷ್ಟು ಪ್ರೀತಿ ಗಳಿಸಿದವರು ಯು ಟಿ ಖಾದರ್. ಅದಕ್ಕೆ ಕಾರಣ ಅವರ ವ್ಯಕ್ತಿತ್ವ. ಸರ್ವಧರ್ಮವನ್ನು ಸಮಾನವಾಗಿ ಪ್ರೀತಿಸುವ  ಯು ಟಿ ಖಾದರ್ ಪಕ್ಷ ಭೇದವಿಲ್ಲದೇ ಎಲ್ಲರಿಗೂ ಇಷ್ಟವಾಗ್ತಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಯು ಟಿ ಖಾದರ್ ಅವರ ಆ ವೀಡಿಯೋವೊಂದು ವೈರಲ್ ಆಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ತುಳುನಾಡ ಜವನೆರ್ ಬೆಂಗಳೂರು ವತಿಯಿಂದ ನಡೆದ ಅಷ್ಟೆಮಿದ ಐಸಿರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಜ್ಯ ರಾಜಕರಾಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆಗ ವಿಧಾನಸಭೆಯಲ್ಲಿ ರಾಜಕಾರಣಿಗಳು ಕಿತ್ತಾಡಿಕೊಳ್ಳುತ್ತಾರೆ. ಅದು ಕೇವಲ ಟಿವಿಯಲ್ಲಿ ಬರುವ ಹತ್ತು ನಿಮಿಷ ಮಾತ್ರ. ಹೊರಗೆ ಬರುವಾಗ ಒಟ್ಟಿಗೆ ಕೂತು ಟೀ ಕುಡಿಯುತ್ತಾರೆ. ಊಟಾನೂ ಮಾಡ್ತಾರೆ, ಹೆಗಲ ಮೇಲೆ ಕೈ ಹಾಕಿಕೊಂಡು ಎಲ್ಲಾ ವ್ಯವಹಾರ ಜೊತೆಯಾಗಿ ಮಾಡುತ್ತಾರೆ. ಹಾಗಾಗಿ ನಮ್ಮ ಊರಿನ ಜನರಿಗೆ ಅಲ್ಲಿ ಅವರನ್ನು ನೋಡಿ ಕಿತ್ತಾಡಿಕೊಳ್ಳಬೇಡಿ. ಅವರು ಹೊರಗೆ ಬರುವಾಗ ಎಲ್ಲರೂ ಒಂದಾಗಿರುತ್ತಾರೆ. ನೀವು ಕೂಡ ಹಾಗೇ ಒಟ್ಟಿಗೆ ಖುಷಿಯಾಗಿರಬೇಕು ಎಂದು ನಾನು ಹೇಳುತ್ತೇನೆ ಎಂದಿದ್ದಾರೆ.

https://youtu.be/UuHvXr985ZQ?si=OYFWS-_6LSllNYIx

ಸ್ಪೀಕರ್ ಆಡಿದ ಮಾತು ನೂರಕ್ಕೆ ನೂರು ಸತ್ಯ.ಖಾದರ್ ಮಾತಿಗೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರೊಬ್ಬ ಸಜ್ಜನ ರಾಜಕಾರಣಿ ಎಂದಿದ್ದಾರೆ.

 

Leave A Reply

Your email address will not be published.