ಮಂಗಳೂರು; ನಂದಿನಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

Mangalore news youth dead body found in Mangalore river

Mangaluru; ಯುವಕನೊಬ್ಬ ಮೃತದೇಹ ನಂದಿನಿ ನದಿಯಲ್ಲಿ ಪತ್ತೆಯಾದ ಘಟನೆ ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿಯ ನಂದಿನಿ ನದಿಯ ದಡದಲ್ಲಿ ನಡೆದಿದೆ.

ಸುಮಾರು20ರಿಂದ 23ರ ಆಸುಪಾಸಿನ ಹರೆಯದ ಯುವಕನ ಶವವಾಗಿದ್ದು, ಶವವನ್ನು ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.ಶವದ ಮುಖವೆಲ್ಲಾ ಕೊಳೆತಿಗೆ. ಮೂಲ್ಕಿ ಪೊಲೀಸರು ಶವ ಪರೀಕ್ಷೆಯನ್ನು ಮಂಗಳೂರಿನ(Mangaluru) ವೆನ್‌ಲಾಕ್‌ ಆಸ್ಪತ್ರೆಗೆ ರವಾನಿಸಿ, ವೈದ್ಯಾಧಿಕಾರಿಗಳು ಮೂಲಕ ನಡೆಸಿದ್ದಾರೆ.

ಈ ನಡುವೆ ಎರಡೂ ಮನೆಯವರು ಅದೇ ವಯಸ್ಸಿನ ಯುವಕನು ನಮ್ಮ ಮನೆಯಿಂದ ಕಾಣೆಯಾಗಿದ್ದಾನೆ ಶವವು ಅವರನ್ನೇ ಹೋಲುತ್ತದೆ ಎಂದು ಸಂಶಯಿಸಿದ್ದು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಪೊಲೀಸರು ಸೂಕ್ತ ತನಿಖೆಯನ್ನು ಮುಂದುವರಿಸಿದ್ದಾರೆ.ದಲಿತ ಸಮುದಾಯದ ಸಂಘಟನೆಗಳ ಪ್ರಮುಖರು ಸಹ ಆಸ್ಪತ್ರೆಗೆ ಹಾಗೂ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದು ಸೂಕ್ತ ತನಿಖೆ ನಡೆಸಲು ಆಗ್ರಹಿಸಿದ್ದಾರೆ.

Leave A Reply

Your email address will not be published.