Note exchange: 2 ಸಾವಿರ ರೂಪಾಯಿ ನೋಟಿನ ವಿನಿಯಮಕ್ಕೆ ಇಂದೇ ಲಾಸ್ಟ್ ಡೇಟ್: ಇಂದು ಆಗಿಲ್ಲ ಅಂದ್ರೆ ಏನ್ ಮಾಡ್ಮೇಕು?

Today is the last date for exchange 2k notes

Note exchange: ನವದೆಹಲಿ: ಆರ್‌ಬಿಐ ಕಳೆದ ಮೇ ನಲ್ಲಿ 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯನ್ನು ಹಿಂಪಡೆದಿತ್ತು. ಬಳಿಕ ಅವುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಲು ನೀಡಿದ್ದ 3 ತಿಂಗಳ ಗಡುವು ನೀಡಿತ್ತು. ಅದರಂತೆ ನೋಟು ವಿನಿಮಯ( Note exchange)ಮಾಡಲು ಇಂಜದೇ ಕೊನೆಯ ದಿನಾಂಕವಾಗಿದೆ.

ಸಾರ್ವಜನಿಕರು ತಮ್ಮ ಹತ್ತಿರದ ಯಾವುದೇ ಬ್ಯಾಂಕ್‌ಗೆ ತೆರಳಿ ತಮ್ಮಲ್ಲಿರುವ 2,000 ರು. ಮುಖ ಬೆಲೆಯ ನೋಟು ನೀಡಿ ಇತರ ನೋಟುಗಳಿಂದ ಬದಲಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ. ಈ ನಡುವೆ ಗಡುವು ಮುಗಿದ ಬಳಿಕವೂ ನೋಟುಗಳನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂಬ ಪ್ರಶ್ನೆ ಎದ್ದಿದೆ. ಆದರೆ ಈ ಬಗ್ಗೆ ಅಕ್ಟೋಬರ್ 1 ರಂದು ಆರ್‌ಬಿಐ ತನ್ನ ಯಾವುದೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಗಡುವು ವಿಸ್ತರಿಸದೆ ನೋಟು ಅಮಾನ್ಯ ಮಾಡಬಹುದು ಎನ್ನಲಾಗುತ್ತಿದೆ.

ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರು. ಮೌಲ್ಯದ ನೋಟುಗಳ ಪೈಕಿ ಆ.31ರ ವೇಳೆಗೆ ಶೇ.93ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಎನ್ನಲಾಗಿದೆ.

ಇದನ್ನೂ ಓದಿ : ಜಗತ್ತಿಗೆ ಭಿಕ್ಷುಕರನ್ನು ಮತ್ತು ಜೇಬುಗಳ್ಳರನ್ನು ರಫ್ತು ಮಾಡೋದ್ರಲ್ಲಿ ನಾವೇ ಫಸ್ಟ್ ಹೀಗಂದ ದೇಶ ಯಾವುದು ಗೊತ್ತಾ ?!

Leave A Reply

Your email address will not be published.