Bengaluru: ಈರುಳ್ಳಿ ಬೆಳೆಗಾರರಿಗೆ ಬಂಪರ್ ನ್ಯೂಸ್: ರಫ್ತಿಗೆ ಇದ್ದ 40% ಟ್ಯಾಕ್ಸ್ ರದ್ದು! ತಕ್ಷಣದಿಂದ ಜಾರಿ !

Bengaluru news Cancellation of 40 percentage tax on onion export

Bengaluru: ‘ಬೆಂಗಳೂರು ಗುಲಾಬಿ ಈರುಳ್ಳಿ’ ರಫ್ತಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಕೆಲವು ಷರತ್ತುಗಳೊಂದಿಗೆ ಕೇಂದ್ರ ಸರ್ಕಾರವು ‘ಬೆಂಗಳೂರು ಗುಲಾಬಿ ಈರುಳ್ಳಿ’ ರಫ್ತಿಗೆ ಇತ್ತೀಚೆಗಷ್ಟೇ ವಿಧಿಸಿದ್ದ ಸುಂಕ ಸಡಿಲವಾಗಿದೆ. ಈ ಮೂಲಕ ಬೆಳೆಗಾರರಿಗೆ ಗುಡ್ ನ್ಯೂಸ್ ನೀಡಿದೆ ಕೇಂದ್ರ ಸರ್ಕಾರ.

ರಫ್ತುದಾರರು ರಾಜ್ಯ ತೋಟಗಾರಿಕಾ ಇಲಾಖೆಯ ಆಯುಕ್ತರಿಂದ ಪ್ರಮಾಣಪತ್ರವನ್ನು ಪಡೆಯಬೇಕಿರುತ್ತದೆ. ಈ ಪ್ರಮಾಣಪತ್ರವು ‘ಬೆಂಗಳೂರು ಗುಲಾಬಿ ಈರುಳ್ಳಿ’ ರಫ್ತನ್ನು ದೃಢೀಕರಿಸುತ್ತದೆ. ಇಂತವರು ಈ ವಿನಾಯಿತಿಯ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಅಧಿಸೂಚನೆ ಹೊರಡಿಸಿ ತಿಳಿಸಿದೆ. ಅಲ್ಲದೆ, ಈ ಅಧಿಸೂಚನೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದಿದೆ.

‘ಬೆಂಗಳೂರು ಗುಲಾಬಿ ಈರುಳ್ಳಿ’ ಎಂಬುದು ಕರ್ನಾಟಕದ ಬೆಂಗಳೂರು(Bengaluru )ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಒಂದು ಬಗೆಯ ಈರುಳ್ಳಿಯಾಗಿದೆ. ಇದು 2015 ರಲ್ಲಿ ಭೌಗೋಳಿಕ ಸೂಚಕ ಟ್ಯಾಗ್ ಅನ್ನು ಹೊಂದಿದೆ. ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಇರುವಂತೆ ನೋಡಿಕೊಳ್ಳಲು ಮತ್ತು ಬೆಲೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇ. 40 ರಷ್ಟು ಅಧಿಕ ಸುಂಕ ವಿಧಿಸಿತ್ತು. 2023-24 ರಲ್ಲಿ 3 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ ಆಗಿಡಲು ಕೇಂದ್ರ ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. 2022-23 ರಲ್ಲಿ ಸರ್ಕಾರವು 2.51 ಲಕ್ಷ ಟನ್ ಈರುಳ್ಳಿಯ ಬಫರ್ ಸ್ಟಾಕ್ ಅನ್ನು ಹೊಂದಿತ್ತು.
ಏಪ್ರಿಲ್-ಜೂನ್ ಅವಧಿಯಲ್ಲಿ ಕೊಯ್ಲು ಮಾಡಿದ ಬೆಂಗಳೂರಿನ ರೂಬಿ ಈರುಳ್ಳಿ ಭಾರತದ ಈರುಳ್ಳಿ ಉತ್ಪಾದನೆಯ 65 ಪ್ರತಿಶತವನ್ನು ಹೊಂದಿದೆ ಮತ್ತು ಇದು ಅಕ್ಟೋಬರ್-ನವೆಂಬರ್‌ನಲ್ಲಿ ಖಾರಿಫ್ ಬೆಳೆ ಕೊಯ್ಲು ಮಾಡುವವರೆಗೆ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ. ಈಗ ರಫ್ತಿನ ಮೇಲೆ ಇರುವ ಟ್ಯಾಕ್ಸ್ ತೆಗೆದು ಹಾಕಿದ ಕಾರಣ ರೈತರು ಖುಷಿಯಾಗಿದ್ದಾರೆ. ಜತೆಗೆ ರಫ್ತುದಾರರು ಹೆಚ್ಚಿನ ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

One minute Sari: ಬಂದಿದೆ ‘ಒನ್ ಮಿನಿಟ್ ಸಾರಿ’ : ಒಂದು ಮಿನಿಟ್ ನಲ್ಲಿ ಸೀರೆ ಉಟ್ಟು ತೋರ್ಸಿ; ಹುಡುಗ್ರು – ಗಂಡಂದಿರು ಫುಲ್ ಶಾಕ್ !!

ಇದನ್ನೂ ಓದಿ: ಟ್ಯಾಕ್ಸಿ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸರ್ಕಾರ – ಕೊನೆಗೂ ‘ಇದನ್ನು’ ಬ್ಯಾನ್ ಮಾಡಲು ಮಹತ್ವದ ನಿರ್ಧಾರ !

Leave A Reply

Your email address will not be published.