Bengaluru: ಒಂಟಿಯಾಗಿ ಹುಡುಗಿ ಕಂಡ್ರೆ ಓಡೋಡಿ ಬರ್ತಾನೆ, ಯುವತಿಯರ ಬಾಚಿ ಖಾಸಗಿ ಭಾಗಕ್ಕೇ ಕೈ ಹಾಕ್ತಾನೆ- ಕಾಮುಕ ಅರೆಸ್ಟ್ !

Bengaluru news man arrested for assaulted lonely woman in isolated areas

Bengaluru: ಬೆಂಗಳೂರು(Bengaluru) ನಗರದ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು, ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ ಒಬ್ಬಾಕೆ ಆರೋಪಿ ವಿರುದ್ಧ ದೂರು ದಾಖಲಿಸಿದಾಗ ಹಲವು ಅಪರಾಧ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ನಿರ್ಜನ ಪ್ರದೇಶಗಳಲ್ಲಿ ಒಂಟಿ ಮಹಿಳೆಯರ ಮೇಲೆ ಕಣ್ಣು ಹಾಕುವ ಈತ ಅವರ ಬಳಿ ಸಾಗಿ ಅನುಚಿತವಾಗಿ ವರ್ತಿಸುತ್ತಿದ್ದ. ಹಾಗೆ ನಿರ್ಜನ ಪ್ರದೇಶಗಳಲ್ಲಿ ಸಿಕ್ಕ ಆತ ಮಹಿಳೆಯರ ಮೈಗೆ ಕೈ ಹಾಕಿ ಎಳೆಯುತ್ತಿದ್ದ.

ಇತ್ತೀಚೆಗೆ ರಾತ್ರಿ ಊಟ ಮುಗಿಸಿ ಇಂದು ಸಣ್ಣ ವಾಕ್ ಮಾಡುತ್ತಿದ್ದ ಯುವತಿಯನ್ನು ಕಂಡು ಬೈಕ್ನಲ್ಲಿ ದಿಢೀರನೇ ಪ್ರತ್ಯಕ್ಷವಾಗಿದ್ದ ಕಾಮುಕ ಅಯ್ಯಪ್ಪ, ಅಣತಿ ದೂರದಲ್ಲಿ ಬೈಕ್ ನಿಲ್ಲಿಸಿದ್ದ. ನಂತರ ಯುವತಿಯನ್ನ ಫಾಲೋ ಮಾಡಿ ಆಯ್ದ ನಿರ್ಜನ ಜಾಗದಲ್ಲಿ ಬಾಚಿಕೊಂಡಿೆದ್ದ. ಆಕೆಯ ದೇಹದ ಗುಪ್ತ ಭಾಗಗಳನ್ನು ಮುಟ್ಟಿದ್ದ. ಈತನ ಅಸಭ್ಯ ವರ್ತನೆ ಕಂಡು ಯುವತಿ ಕಿರುಚಾಡಿದ್ದಾಳೆ. ಆಗ ಕಾಮುಕ ಬೈಕ್ನಲ್ಲಿ ಎಸ್ಕೇಪ್ ಆಗಿದ್ದ. ಈ ಘಟನೆ ವಸಂತನಗರದಲ್ಲಿ ನಡೆದಿದ್ದು ಘಟನೆ ಬಗ್ಗೆ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕೇಸ್ ದಾಖಲಿಸಿಕೊಂಡ ಪೊಲೀಸರು ವೈಯ್ಯಾಲಿ ಕಾವಲ್ ನಿವಾಸಿ ಅಯ್ಯಪ್ಪನನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕಾಮುಕನ ಮತ್ತಷ್ಟು ನೀಚ ಕೃತ್ಯಗಳು ಬೆಳಕಿಗೆ ಬಂದಿವೆ. ವರ್ಕ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಅಯ್ಯಪ್ಪ, ರಿಪೇರಿಗೆ ಬರುವ ಬೈಕ್ ತೆಗೆದುಕೊಂಡು ನಗರದಲ್ಲಿ ಸುತ್ತಾಡುತ್ತಿದ್ದ. ದಿನಕ್ಕೊಂದು ಬೈಕ್ನಲ್ಲಿ ರೌಂಡ್ಸ್ ಹಾಕುತ್ತಿದ್ದ. ಈ ವೇಳೆ ಒಂಟಿಯಾಗಿ ಯುವತಿಯರು ಕಂಡ್ರೆ ಅವರನ್ನು ತಬ್ಬಿ, ಖಾಸಗಿ ಅಂಗ ಮುಟ್ಟಿ ಎಸ್ಕೇಪ್ ಆಗುತ್ತಿದ್ದ. ಈ ರೀತಿ ಅನೇಕ ಬಾರಿ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿ ಎಸ್ಕೇಪ್ ಆಗಿದ್ದ. ಸದ್ಯ ಕಾಮುಕನನ್ನ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬೈಕ್ ಮೆಕ್ಯಾನಿಕ್ ಆಗಿರುವ ಅಯ್ಯಪ್ಪ ಎಂದು ಗುರುತಿಸಲಾಗಿದೆ. ವೈಯಾಲಿಕಾವಲ್ ನಿವಾಸಿ ಅಯ್ಯಪ್ಪ ಹೀಗೆ ಒಂಟಿ ಮಹಿಳೆಯರ ಮೇಲೆ ವಕ್ರ ದೃಷ್ಟಿ ಬೀರಿದ ವ್ಯಕ್ತಿ. ಈತನನ್ನು ಸಿಸಿ ಟಿವಿ ಆದಾರದ ಮೇಲೆ ಪೊಲೀಸರು ಹಿಡಿದಿದ್ದಾರೆ. ವಿಚಾರಣೆ ವೇಳೆ, ಅಯ್ಯಪ್ಪ ತಾನು ಕೆಲಸ ಮಾಡುತ್ತಿದ್ದ ಗ್ಯಾರೇಜ್‌ನಿಂದ ಬೈಕ್ ತೆಗೆದುಕೊಂಡು ಪ್ರತಿದಿನ ಒಂಟಿ ಮಹಿಳೆಯನ್ನು ಹಿಂಬಾಲಿಸುತ್ತಿದ್ದ. ನಿರ್ಜನ ಪ್ರದೇಶದಲ್ಲಿ ಆತ ಅವರನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

Bengaluru carpooling ban: ಟ್ಯಾಕ್ಸಿ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸರ್ಕಾರ – ಕೊನೆಗೂ ‘ಇದನ್ನು’ ಬ್ಯಾನ್ ಮಾಡಲು ಮಹತ್ವದ ನಿರ್ಧಾರ !

ಇದನ್ನೂ ಓದಿ: ಸೂರ್ಯನತ್ತ ನಿರಂತರ ರೆಕ್ಕೆ ಬೀಸುತ್ತಿರುವ ಆದಿತ್ಯ ಎಲ್ 1 ನೌಕೆ, ಇದುವರೆಗೂ ಎಷ್ಟು ಲಕ್ಷ ಕಿ.ಮೀ ಪ್ರಯಾಣಿಸಿದೆ ?

Leave A Reply

Your email address will not be published.