Aditya L1 mission: ಸೂರ್ಯನತ್ತ ನಿರಂತರ ರೆಕ್ಕೆ ಬೀಸುತ್ತಿರುವ ಆದಿತ್ಯ ಎಲ್ 1 ನೌಕೆ, ಇದುವರೆಗೂ ಎಷ್ಟು ಲಕ್ಷ ಕಿ.ಮೀ ಪ್ರಯಾಣಿಸಿದೆ ?

ISRO Aditya L1 sun mission update Aditya-L1 spacecraft successfully escapes sphere of Earths influence

 

Aditya L1 sun mission: ಭಾರತದ ಮಹತ್ವಾಕಾಂಕ್ಷೆಯ ಸೂರ್ಯ ಯೋಜನೆಯ ಆದಿತ್ಯ- ಎಲ್1 (Aditya L1 sun mission) ನೌಕೆಯು ಭೂಮಿಯಿಂದ ನಿರಂತರವಾಗಿ ತನ್ನ ಪ್ರಯಾಣವನ್ನು ಮುಂದುವರಿಸುತ್ತಾ ಇದೆ. ಈಗಾಗಲೇ ಬರೋಬ್ಬರಿ 9.2 ಲಕ್ಷ ಕಿಲೋ ಮೀಟರ್ಗಳಾಚೆಗೆ ತನ್ನ ರೆಕ್ಕೆ ಬೀಸಿದೆ ಆದಿತ್ಯ ಎಲ್ 1 ರಾಕೆಟ್. ಈಗ ಭೂಮಿಯ ಪ್ರಭಾವವಲಯವನ್ನು ದಾಟಿ ಸೂರ್ಯನತ್ತ ದಾಪುಗಾಲು ಹಾಕಿ ಸಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮಾಹಿತಿ ನೀಡಿದೆ.

ಸದ್ಯ ಸೂರ್ಯ ಮತ್ತು ಭೂಮಿಯ ನಡುವಿನ ಲಾಂಗ್ರಿಗಿಯನ್ ಕೇಂದ್ರ 1 (Aditya L1)ರ ಕಡೆ ಆದಿತ್ಯ ಎಲ್ 1 ನೌಕೆಯು ಹೊರಟಿದೆ. ಈ ಕೇಂದ್ರವು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀಟರ್ ಗಳ ದೂರವಿದೆ. ಭೂಮಿಯಿಂದ ಸೂರ್ಯನ ದೂರ ಸುಮಾರು 600 ಮಿಲಿಯನ್ ಕಿಲೋಮೀಟರುಗಳ ದೂರದಲ್ಲಿದ್ದು ಆದಿತ್ಯ ಒಟ್ಟಾರೆ ಸೂರ್ಯನ ದೂರದ 1% ದೂರವನ್ನು ಕ್ರಮಿಸಲಿದೆ. ಮಾರ್ಸ್ ಆರ್ಬಿಟರ್ ಮಿಷನ್ ಇಸ್ರೋ ರೂಬಿಯ ಪ್ರಭಾವದಿಂದ ಹೊರಕ್ಕೆ ಕಳುಹಿಸಿದ ಮೊದಲ ಗಗನ ನೌಕೆ. ಇದೀಗ ಎರಡನೇ ಬಾರಿಗೆ ಭೂಮಿಯ ಪ್ರಭಾ ವಲಯದಿಂದ ಆದಿತ್ಯ ನೌಕೆಯನ್ನು ಹೊರಗೆ ಕಳುಹಿಸಿದೆ

ಸೂರ್ಯ ಯಾನ ಪ್ರಾಜೆಕ್ಟ್ ನ ಭಾಗವಾಗಿ ಆದಿತ್ಯ-ಎಲ್ 1 ಮಿಷನ್ ಅನ್ನು 2023 ರ ಸೆ. 2 ರಂದು PSLV-C 57 ರಾಕೆಟ್ನಲ್ಲಿಟ್ಟು ಉಡಾವಣೆ ಮಾಡಲಾಯಿತು. ಇದು ಭಾರತದ ಮೊದಲ ಡೆಡಿಕೇಟೆಡ್ ಸೌರ ವೀಕ್ಷಣಾಲಯ ಕೆಟಗರಿ ಮಿಷನ್. ಏಳು ವಿವಿಧ ಪೇಲೋಡ್ಗಳನ್ನು ನೌಕೆ ಹೊತ್ತೊಯ್ದಿದೆ. ಸೂರ್ಯನ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಿ ಈ ಪೆ ಲೋಡ್ ಗಳನ್ನು ರಚಿಸಲಾಗಿದೆ.

ಏಳು ಪೇಲೋಡ್ಗಳಲ್ಲಿ ನಾಲ್ಕು ಸೂರ್ಯನ ಬೆಳಕನ್ನು ಪರಿವೀಕ್ಷಣೆ ಮಾಡಿದರೆ, ಉಳಿದ 3 ಪೇಲೋಡ್ಗಳು ಸೂರ್ಯನ ಕಾಂತೀಯ ಕ್ಷೇತ್ರಗಳು ಮತ್ತು ಪ್ಲಾಸ್ಮಾದ ಇನ್ ಸಿತು ( ಸ್ತಳೀಯ ) ಪ್ಯಾರಾಮೀಟರ್ಗಳನ್ನು ಅಳತೆ ಮಾಡಿ ನಮಗೆ ಕಳಿಸಲಿದೆ. ಭೂಮಿಯ ಸುತ್ತಲಿನ ಕಣಗಳ ನಡವಳಿಕೆ, ಸೌರ ಮಾರುತದ ಮೂಲ ಮತ್ತು ವೇಗವರ್ಧನೆ ಮತ್ತು ಬಾಹ್ಯಾಕಾಶ ಹವಾಮಾನ ವಿದ್ಯಮಾನಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಈ ಪ್ರೊಜೆಕ್ಟ್ ಒದಗಿಸಬಲ್ಲುದು.

ಆದಿತ್ಯ-ಎಲ್1 ನೌಕೆಯು ಎಲ್1 ಬಿಂದುವನ್ನು ತಲುಪಿದ ನಂತರ, ಅದು ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ, ಸೂರ್ಯನಿಗೆ ಸದಾ ಮುಖ.ಮಾಡಿ ಅಲ್ಲಿ ನಿಲ್ಲುತ್ತದೆ. ಸಂಬಂಧಿತ ಸ್ಥಾನವನ್ನು ನಿರ್ವಹಿಸುತ್ತದೆ. ಈ ಬಾಹ್ಯಾಕಾಶ ನೌಕೆಯು ತನ್ನ ಐದು ವರ್ಷಗಳ ಕಾರ್ಯಾಚರಣೆಯ ಸಂದರ್ಭದ ಉದ್ದಕ್ಕೂ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಆದಿತ್ಯ ಎಲ್ 1 ನೌಕೆಯು ಸೌರ ಭೌತಶಾಸ್ತ್ರದ ಮಹತ್ವದ ಕೊಡುಗೆಯನ್ನು ನೀಡಲಿದೆ ಎನ್ನುವುದು ವಿಜ್ಞಾನಿಗಳ ಆಶಯ.

ಇದನ್ನೂ ಓದಿ:ವಿಘ್ನ ವಿನಾಯಕನ ಮೆರವಣಿಗೆ ಸಂದರ್ಭ 11,000 ವೋಲ್ಟೇಜ್ ವಿದ್ಯುತ್ ಶಾಕ್ ! ಇಬ್ಬರು ಸಾವು, ಹಲವರಿಗೆ ಗಾಯ !

Leave A Reply

Your email address will not be published.