Madhya pradesh: ವಿಘ್ನ ವಿನಾಯಕನ ಮೆರವಣಿಗೆ ಸಂದರ್ಭ 11,000 ವೋಲ್ಟೇಜ್ ವಿದ್ಯುತ್ ಶಾಕ್ ! ಇಬ್ಬರು ಸಾವು, ಹಲವರಿಗೆ ಗಾಯ !

National news 2 men dead of electrocution during Ganesh procession in Madhya Pradesh

Madhya pradesh: ವಿಘ್ನ ವಿನಾಯಕನ ಮೆರವಣಿಗೆಯ ಸಂದರ್ಭವೇ ವಿಘ್ನ ಉಂಟಾದ ಘಟನೆ ನಡೆದಿದೆ. ಗಣೇಶನ ಮೆರವಣಿಗೆ ವೇಳೆ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ (Madhya pradesh)ಛಿಂದ್ವಾರಾ ಜಿಲ್ಲೆಯ ತಾರಾ ಕಾಲೋನಿಯಿಂದ ಈ ದುರಂತ ವರದಿಯಾಗಿದೆ. ಮೃತರನ್ನು ರಾಹುಲ್ ಠಾಕೂರ್ (38), ಸಂಜಯ್ ಚೌರೆ (22) ಎಂದು ಗುರುತಿಸಲಾಗಿದೆ. ಹೈ ವೋಲ್ಟೇಜ್ ವಿದ್ಯುತ್ ತಂತಿ ತಾಗಿದ ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 30 ವರ್ಷದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆತನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶನಿವಾರ ರಾತ್ರಿ 9 ಘಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಗಣೇಶನ ಮೂರ್ತಿ ಇಡಲಾಗಿದ್ದ ಟ್ರ್ಯಾಕ್ಟರ್ 11 ಸಾವಿರ ವೋಲ್ಟೇಜ್ ಇರುವ ವಿದ್ಯುತ್ ತಂತಿಗೆ ತಾಗಿದೆ. ಈ ಸಂದರ್ಭ ಸಾವು ನೋವು ಸಂಭವಿಸಿದೆ.

ಅದೊಂದು ಸಾವಿರ ವೋಲ್ಟೇಜ್ ಕರೆಂಟ್ ಶಾಕ್ ಆದ ಸಂಭವಿಸಿದ ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಛಿಂದ್ವಾರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:ಈರುಳ್ಳಿ ಬೆಳೆಗಾರರಿಗೆ ಬಂಪರ್ ನ್ಯೂಸ್ ರಫ್ತಿಗೆ ಇದ್ದ 40% ಟ್ಯಾಕ್ಸ್ ರದ್ದು

 

Leave A Reply

Your email address will not be published.