Bengaluru carpooling ban: ಟ್ಯಾಕ್ಸಿ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸರ್ಕಾರ – ಕೊನೆಗೂ ‘ಇದನ್ನು’ ಬ್ಯಾನ್ ಮಾಡಲು ಮಹತ್ವದ ನಿರ್ಧಾರ !

National news Bengaluru carpooling ban white board car challan implemented fines upto 10000 rs

Bengaluru carpooling ban: ಬೆಂಗಳೂರು ಸಾರಿಗೆ ಇಲಾಖೆಯು ಈಗ ಮೊಬೈಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಕಾರ್‌ಪೂಲಿಂಗ್ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಟ್ಯಾಕ್ಸಿ ಚಾಲಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಕಾರ್‌ ಪೂಲಿಂಗ್ ಈಗ ಕಾನೂನುಬಾಹಿರ(Bengaluru carpooling ban) ! ಕಾರ್ ಪೂಲಿಂಗ್ ಮಾಡುವುದಕ್ಕೆ ಒಟ್ಟು 10,000 ರೂ. ತನಕ ದಂಡವನ್ನು ಫಿಕ್ಸ್ ಮಾಡಲಾಗಿದೆ.

ಟ್ಯಾಕ್ಸಿ ಚಾಲಕರಿಂದ ವ್ಯಾಪಕ ದೂರುಗಳನ್ನು ಸ್ವೀಕರಿಸಿದ ನಂತರ, ಬೆಂಗಳೂರಿನ ಸಾರಿಗೆ ಇಲಾಖೆಯು ಇದೀಗ ಕ್ವಿಕ್ ರೈಡ್, ಬ್ಲಾಬ್ಲಾಕಾರ್ ಮುಂತಾದ ಮೊಬೈಲ್ ಅಪ್ಲಿಕೇಶನ್ ಮುಂತಾದ ಪ್ಲಾಟ್‌ ಫಾರ್ಮ್‌ಗಳನ್ನು ಬಳಸಿಕೊಂಡು ಕಾರ್‌ ಪೂಲಿಂಗ್ ಮಾಡಲಾಗುತ್ತಿತ್ತು. ಅದರ ವಿರುದ್ಧ ಈಗ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಪ್ರತಿ ವ್ಯಕ್ತಿಗೆ ಒಂದೊಂದು ವಾಹನಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಬದಲು ಒಂದೇ ಮಾರ್ಗದ ಮೂಲಕ ಸಾಗುವ ಜನರನ್ನು ಒಂದೇ ವಾಹನದಲ್ಲಿ ಕರೆದೊಯ್ಯುವ ವ್ಯವಸ್ಥೆಯೇ ಕಾರ್ ಪೂಲಿಂಗ್. ಈ ಮೂಲಕ ನಗರಗಳ ದಟ್ಟಣೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಬಿಳಿ ನಂಬರ್ ಪ್ಲೇಟ್ ಉಳ್ಳ ವಾಹನಗಳನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ. ಆದರೆ, ಬಿಳಿ ನೋಂದಣಿ ಫಲಕ ಹೊಂದಿರುವ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ನಿಷಿದ್ಧ. ಈಗ ಕೆಲ ಆ್ಯಪ್‌ಗಳನ್ನು ಬಳಸಿಕೊಂಡು ಕಾರ್‌ಪೂಲಿಂಗ್‌ನಲ್ಲಿ ತೊಡಗಿರುವವರು ಇನ್ನು ಮುಂದೆ ಕಾರ್ ಪೂಲಿಂಗ್ ಮಾಡುವಂತಿಲ್ಲ.

ಕಾರ್ ಪೂಲಿಂಗ್ ಗೆ ಏನು ಶಿಕ್ಷೆ ?

* ಕಾರ್ ಪೂಲಿಂಗ್ ಮಾಡುವವರ ಆರು ತಿಂಗಳವರೆಗೆ ವಾಹನದ ನೋಂದಣಿ ಪ್ರಮಾಣಪತ್ರವನ್ನು (ಆರ್‌ಸಿ) ಅಮಾನತುಗೊಳಿಸುವುದು
* 5,000 ರಿಂದ 10,000 ರೂ. ರೂ. ತನಕ ದಂಡವನ್ನು ಹಾಕಬಹುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ಜಾರಿ) ಮಲ್ಲಿಕಾರ್ಜುನ್ ಸಿ ಎಂಬವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

“ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗದ ಖಾಸಗಿ ಕಾರುಗಳನ್ನು ಒಟ್ಟುಗೂಡಿಸುವ ಮೂಲಕ ಕಾರ್ಪೂಲಿಂಗ್ ಅಪ್ಲಿಕೇಶನ್ಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ. ನಾವು ಟ್ಯಾಕ್ಸಿ ಚಾಲಕರ ಸಂಘಗಳಿಂದ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ. ಟ್ಯಾಕ್ಸಿ ಚಾಲಕ ಟ್ಯಾಕ್ಸಿಯನ್ನು ನೋಂದಾಯಿಸಿಕೊಳ್ಳಬೇಕು, ಪರವಾನಗಿಗಳನ್ನು ಪಡೆಯಬೇಕು ಮತ್ತು ತೆರಿಗೆ ಪಾವತಿಸಬೇಕು, ಆದರೆ ಈ ಕಾರ್‌ಪೂಲ್ ಅಪ್ಲಿಕೇಶನ್‌ಗಳು ಯಾವುದೇ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ.

One minute Sari: ಬಂದಿದೆ ‘ಒನ್ ಮಿನಿಟ್ ಸಾರಿ’ : ಒಂದು ಮಿನಿಟ್ ನಲ್ಲಿ ಸೀರೆ ಉಟ್ಟು ತೋರ್ಸಿ; ಹುಡುಗ್ರು – ಗಂಡಂದಿರು ಫುಲ್ ಶಾಕ್ !!

ರಸ್ತೆಗಳ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ, ಕಾರ್‌ಪೂಲಿಂಗ್ ಇಂಧನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 100 ರೂಪಾಯಿ ಕಾರ್ ಚಾರ್ಜ್ ಆಗುವ ಕಡೆ ಕೇವಲ 40 ರೂಪಾಯಿಗಳಲ್ಲಿ ಕಾರ್ ಪೂಲಿಂಗ್ ನಲ್ಲಿ ಪ್ರಯಾಣಿಸಬಹುದು. ಇದರಿಂದಾಗಿ ಜನರ ಪ್ರಯಾಣದ ವೆಚ್ಚ ಭಾರೀ ಕಡಿಮೆಯಾಗುತ್ತದೆ. ಅಲ್ಲದೆ ಇದು ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗೆ ಕಾರ್ ಪೂಲಿಂಗ್ ವ್ಯವಸ್ಥೆಯಲ್ಲಿ ಹಲವಾರು ಉಪಯೋಗಗಳಿದ್ದರೂ, ಇದನ್ನು ಬ್ಯಾನ್ ಮಾಡಿದ್ದು ಎಷ್ಟು ಸರಿ. ದಯವಿಟ್ಟು ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

ಇದನ್ನೂ ಓದಿ: ತಮಿಳುನಾಡಿನಲ್ಲಿ 100 ಅಡಿ ಆಳಕ್ಕೆ ಉರುಳಿದ ಬಸ್‌ – 8 ಮಂದಿ ದುರ್ಮರಣ !

Leave A Reply

Your email address will not be published.