Tamilnadu: ತಮಿಳುನಾಡಿನಲ್ಲಿ 100 ಅಡಿ ಆಳಕ್ಕೆ ಉರುಳಿದ ಬಸ್‌ – 8 ಮಂದಿ ದುರ್ಮರಣ !

Tamilnadu news tourist bus fall into gorge near marapalam 8 killed and several injured

Tamilnadu: ತಮಿಳುನಾಡಿನ (Tamil Nadu) ಮರಪಾಲಂ ಬಳಿ ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 8 ಜನ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಐವರು ಪುರುಷರಾಗಿದ್ದಾರೆ.

ತಮಿಳುನಾಡಿನ ಕೂನೂರು ಬಳಿಯ ಮರಪಾಲಂ (Marapalam) ಎಂಬಲ್ಲಿ ಕಂದಕಕ್ಕೆ ಬಿದ್ದ ಬಸ್‌ನಲ್ಲಿ 55 ಜನರು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಬಿದ್ದು ಭಾರೀ ಸಾವುನೋವಿಗೆ ಕಾರಣ ಆಗಿದೆ. ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ದುರಂತಕ್ಕೆ ವಿಷಾದ ವ್ಯಕ್ತಪಡಿಸಿ, ಇದೀಗ ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಅಪಘಾತದಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಕೊಯಮತ್ತೂರು ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ ಶರವಣ ಸುಂದರ್ ತಿಳಿಸಿದ್ದಾರೆ.

ಮೃತರು ತೆಂಕಶಿ ಜಿಲ್ಲೆಯ ಕಡಯಂ ಮೂಲದವರಾಗಿದ್ದು, ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಕೊಯಮತ್ತೂರ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಬಂದಿದೆ ‘ಒನ್ ಮಿನಿಟ್ ಸಾರಿ’ ಒಂದು ಮಿನಿಟ್ ನಲ್ಲಿ ಸೀರೆ ಉಟ್ಟು ತೋರ್ಸಿ ಹುಡುಗ್ರು – ಗಂಡಂದಿರು ಫುಲ್ ಶಾಕ್ !!

Leave A Reply

Your email address will not be published.