ಸುಬ್ರಮಣ್ಯ: ಕುಮಾರಪರ್ವತ ಚಾರಣಕ್ಕೆ ಮುಗಿ ಬಿದ್ದ ಚಾರಣಪ್ರಿಯರು; ಶಾಕ್ ಕೊಟ್ಟ ಅರಣ್ಯ ಇಲಾಖೆ

Kumaraparvatha trekking is not allowed from tomorrow

Subramnaya;ಸುಬ್ರಮಣ್ಯ; ಸಾಲು ಸಾಲು ರಜೆ(Holiday) ಗಳ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಚಾರಣಪ್ರಿಯರ ದಂಡು ಕುಮಾರಪರ್ವತ(Kumarapavartha)ದತ್ತ ಹರಿದು ಬಂದಿತ್ತು. ಆದರೆ ಇಂತಹ ಚಾರಣಪ್ರಿಯರಿಗೆ ಅರಣ್ಯ ಇಲಾಖೆ( Forest Department) ಶಾಕ್ ನೀಡಿದೆ.

ಮೇ ತಿಂಗಳಿನಿಂದ ಸೆ.29ರ ತನಕ ಬಿರು ಬೇಸಿಗೆ ಮತ್ತು ಅಧಿಕ ಮಳೆ(Rain)ಯ ಕಾರಣ ನಿರ್ಬಂಧ ವಿಧಿಸಲಾಗಿತ್ತು. ಶನಿವಾರದಿಂದ ನಿರ್ಬಂಧ ತೆರವು ಗೊಳಿಸಿ ಚಾರಣಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಮೊದಲ ದಿನವೇ 750ಕ್ಕೂ ಹೆಚ್ಚಿನ ಚಾರಣಿಗರು ಕುಮಾರ    ಪರ್ವತವೇರಲು ಆಗಮಿಸಿದ್ದರು. ಭಾನಪವಾರ ಸಾಕಷ್ಟು ಸಂಖ್ಯೆಯಲ್ಲಿ ಚಾರಣಪ್ರಿಯರು ಕುಮಾರಪರ್ವತಕ್ಕೆ ಟ್ರಕ್ಕಿಂಗ್ ತೆರಳಿದ್ದರು. ಆದರೆ ಈ ದಿನಗಳಲ್ಲಿ ಕುಕ್ಕೆ ಸೇರಿದಂತೆ ಬೆಟ್ಟ ಪ್ರದೇಶದಲ್ಲಿ ಅತ್ಯಧಿಕ ಮಳೆ ಸುರಿದ ಕಾರಣ ಚಾರಣಿಗರಿಗೆ ತೆರಳಲು ಕಷ್ಟವಾಗಿತ್ತು.

ಇನ್ನುಸುರಿಯುತ್ತಿರುವ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಹಾಗೂ ಹವಾಮಾನ ಇಲಾಖೆಯು ನಿರಂತರವಾಗಿ ಜಿಲ್ಲೆಯಲ್ಲಿ ಆರೆಂಜ್‌ ಎಲರ್ಟ್‌ ಘೋಷಿಸಿದ ಹಿನ್ನೆಲೆ ಚಾರಣಿಗರ ಹಿತದೃಷ್ಟಿಯಿಂದ ಅ.3 ರಿಂದ ಮುಂದಿನ ಆದೇಶದವರೆಗೆ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದಿದ್ದಾರೆ.

ಚಾರಣಿಗರ ಹಿತದೃಷ್ಟಿಯಿಂದ ಅ.3ರಿಂದ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ(Trekking) ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.ಭಾರೀ ಮಳೆಯಿಂದ ಕಡಿದಾದ ಬೆಟ್ಟವನ್ನು ಏರಲು ಚಾರಣಿಗರಿಗೆ ಅತಿಯಾದ ಸಂಕಷ್ಟ ಮತ್ತು ಕಷ್ಟವಾಗುವ ಕಾರಣ ನಿರ್ಬಂಧ ವಿಧಿಸಲಾಗಿದೆ. ಇಲಾಖೆಯ ಈ ಆದೇಶಕ್ಕೆ ಚಾರಣಿಗರು, ಪ್ರವಾಸಿಗರು (Tourists) ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅರಣ್ಯ ಇಲಾಖೆ ವಿನಂತಿಸಿದೆ.

ಇದನ್ನೂ ಓದಿ: ಕುಂದಾಪುರ: ಕಾರಿನಲ್ಲಿ ಬಂದ ಅಪರಿಚಿತನಿಂದ ವ್ಯಕ್ತಿಗೆ ಚೂರಿ ಇರಿತ

 

Leave A Reply

Your email address will not be published.