ಶಿವಮೊಗ್ಗದ ಗಲಭೆಯಲ್ಲಿ ಮಂಗಳೂರು ಮೂಲದವರು ಕೈವಾಡ ? ಏನಿದು KA 19 ಥಿಯರಿ ?! ಶಾಕಿಂಗ್ ಸುದ್ದಿ !

ನಿನ್ನೆ ಶಿವಮೊಗ್ಗದಲ್ಲಿ ನಡೆದ ಗುಂಪು ಘರ್ಷಣೆ ಬಗ್ಗೆ ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ 30 ಮಂದಿಯನ್ನು ಬಂಧಿಸಿದ್ದಾರೆ. ಒಟ್ಟು ಏಳು ಮನೆಗಳು ಮತ್ತು ಒಂದು ಬೈಕು ಒಂದು ಆಟೋರಿಕ್ಷಾ ಗಳಿಗೆ ತೀವ್ರ ಹಾನಿಯಾಗಿದೆ. ನಿನ್ನೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಸಂದರ್ಭ ನಡೆದ ಮೆರವಣಿಗೆಯ ಕೆಲವೇ ನಿಮಿಷಗಳ ನಂತರ ಈ ಗುಂಪು ಗಲಭೆ ನಡೆದಿದೆ. ಇದೀಗ ಈ ಘಟನೆ ಪೂರ್ವ ನಿಯೋಜಿತವೇ ಮತ್ತು ಪ್ಲಾನ್ ಮಾಡಿ ನಡೆದಿದೆಯಾ ? ಎಂಬ ಬಗ್ಗೆ ಅನುಮಾನಗಳು ಉಂಟಾಗಲು ಶುರುವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಹೌದು ನಿನ್ನೆ ಮೆರವಣಿಗೆ ಮೇಲೆ ಹಿಂದಿನಿಂದ ಕಲ್ಲು ತೂರಾಟ ನಡೆದ ಘಟನೆಯಲ್ಲಿ ಇರುವ ಸಂಶಯ ವ್ಯಕ್ತವಾಗಿದೆ. ಯಾಕೆಂದರೆ ನಿನ್ನೆ ಗಲಬೆ ನಡೆದ ಪ್ರದೇಶದಲ್ಲಿ ಹಲವು ಊರುಗಳ ವಾಹನಗಳು ಅನುಮಾನಸ್ಪದವಾಗಿ ಓಡಾಡಿದೆ ಎಂದು ಭದ್ರಾವತಿಯ ಶಾಸಕರು ದೂರಿದ್ದಾರೆ. ಅದರಲ್ಲಿ KA 35 ನಂಬರ್ ಪ್ಲೇಟ್ ನ ಗಾಡಿ, ಉತ್ತರ ಪ್ರದೇಶದ UP ಬೋರ್ಡ್ ಇರುವ ವಾಹನ ಮತ್ತು ಮಂಗಳೂರಿನ KA 19 ಇರುವ ವಾಹನದ ವಾಹನಗಳು ನಿನ್ನೆ ಶಿವಮೊಗ್ಗದ ಗಲಭೆ ಪ್ರದೇಶದಲ್ಲಿ ಓಡಾಡಿದೆ, ಎನ್ನುವ ಸ್ಫೋಟಕ ಅಂಶವನ್ನು ಸ್ಥಳೀಯ ಶಾಸಕರು ಮಾಡಿದ್ದಾರೆ.

ಹಾಗಾಗಿ ಇದು ಹೊರಗಿನವರ ಕೃತ್ಯವೇ ಎನ್ನುವ ಅನುಮಾನ ಉಂಟಾಗಿದೆ. ಇದು ಪೂರ್ವ ಯೋಗಿತಾ ಹೊರಗಿನವರ ಕೃತ್ಯವೇ ಅಥವಾ ಇಲ್ಲಿ ಓಡಾಡಿದ ವಾಹನಗಳು ಪ್ರವಾಸಿಗಳ ವಾಹನಗಳೇ ಎನ್ನುವ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಾಗಿದೆ. ಸದ್ಯಕ್ಕೆ ಶಾಸಕರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Leave A Reply

Your email address will not be published.