Shivamogga: ಶಿವಮೊಗ್ಗ ಕೋಮು ಘರ್ಷಣೆ: ಜಿಹಾದಿಗಳಿಗೆ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಎಂದು ಬಿಜೆಪಿ ಟ್ವೀಟ್ !

Shivamogga communal clash: BJP tweets that Congress has supported Jihadists

Shivamogga communal clash: ಶಿವಮೊಗ್ಗದಲ್ಲಿ ಮತ್ತೆ ಕೋಮು ಘರ್ಷಣೆ(Shivamogga communal clash) ನಡೆದಿದೆ. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೀಗ ಈ ಘಟನೆ ಕೋಮು ಬಣ್ಣ ಮತ್ತು ರಾಜಕೀಯ ಬಣ್ಣ ಬಳಿದುಕೊಳ್ಳುತ್ತಿದೆ. ಹಿಂದೂ ಗಳಿಗೆ ಸೇರಿದ 7 ಮನೆಗಳು, ಒಂದು ಬೈಕ್ ಮತ್ತು ಆಟೋ ರಿಕ್ಷಾ ಜಖಂ ಆಗಿದೆ. ಈ ಬಗ್ಗೆ ಬಿಜೆಪಿ ಈಗ ಟ್ವೀಟ್ ಮಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಏನಿದೆ ಬಿಜೆಪಿಯ ಟ್ವೀಟ್ ನಲ್ಲಿ ?
“ಇದು ಶಿವಮೊಗ್ಗದಲ್ಲಿ ಮತಾಂಧರು ಮಾಡಿರುವ ತಲ್ವಾರ್ ಮೆರವಣಿಗೆಯ ವಿಡಿಯೋ. ಇಂತಹ ತಲ್ವಾರ್ ಮೆರವಣಿಗೆಯು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ ಎಂಬುದನ್ನು ಅನುಮತಿ ನೀಡಿದ ಕಾಂಗ್ರೆಸ್ ಸರ್ಕಾರವೇ ತಿಳಿಸಬೇಕು. ಹಿಂದೂಗಳೆಲ್ಲರನ್ನೂ ಒಬ್ಬರು ಉಳಿಯದ ರೀತಿ ಮುಗಿಸುತ್ತೇವೆ ಎಂದು ಹೇಳಿದ ಜಿಹಾದಿ ಸಂಘಟನೆಗಳಿಗೆ ಬೆಂಬಲವಾಗಿ ಕಾಂಗ್ರೆಸ್ ಸರ್ಕಾರ ನಿಂತಿರುವುದಕ್ಕೆ ಬೇರೇನು ಸಾಕ್ಷಿ ಬೇಕು ?”

“ಗಣೇಶ ಚತುರ್ಥಿಗೆ ಹಿಂದೂಗಳು ಸ್ಥಾಪಿಸುವ ಗಣಪತಿಗೆ ನೂರೆಂಟು ಅನುಮತಿ ಕೇಳುವ ಕೈ ಸರ್ಕಾರ, ಸಮಾಜದ ಶಾಂತಿ ಕದಡುವ ಇಂತಹ ಮೆರವಣಿಗೆಗಳಿಗೆ ಅನುಮತಿ ನೀಡಿದ್ದರ ಹಿನ್ನಲೆ ಏನು ? ಈ ಜಿಹಾದಿ ಸರ್ಕಾರದಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ?!” ಇದು ಬಿಜೆಪಿ ಮಾಡಿದ ಟ್ವೀಟ್.
ಈಗ ಘಟನೆಯ ಸಂಬಂಧ ಒಟ್ಟು 30 ಜನರನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಪೊಲೀಸರ ಜತೆ ರಾಪಿಡ್ ಆಕ್ಷನ್ ಫೋರ್ಸ್ ಸ್ಥಳದಲ್ಲಿದ್ದು ಪೊಲೀಸರು ಪರಿಸ್ಥಿತಿಯನ್ನು ಕಂಟ್ರೋಲ್ ಪಡೆದಿದ್ದಾರೆ.

https://x.com/BJP4Karnataka/status/1708506670031110428?s=20

ಇದನ್ನೂ ಓದಿ: ಒಂಟಿಯಾಗಿ ಹುಡುಗಿ ಕಂಡ್ರೆ ಓಡೋಡಿ ಬರ್ತಾನೆ, ಯುವತಿಯರ ಬಾಚಿ ಖಾಸಗಿ ಭಾಗಕ್ಕೇ ಕೈ ಹಾಕ್ತಾನೆ- ಕಾಮುಕ ಅರೆಸ್ಟ್ !

Leave A Reply

Your email address will not be published.