Bantwala: ದಕ್ಷಿಣಕನ್ನಡ ಜಿಲ್ಲೆಯ ಈ ಶಾಲೆಯಲ್ಲಿದ್ದಾರೆ ಒಂದೇ ತರಗತಿಯಲ್ಲಿ 5 ಜೋಡಿ ಅವಳಿ ಮಕ್ಕಳು;ಇವರನ್ನು ನೋಡಿ ಟೀಚರ್ಸ್ ,ಮಕ್ಕಳು ಫುಲ್ ಕನ್ಫ್ಯೂಶನ್

five pair twins studying in same class in bantwala

Bantwala; ಮಂಗಳೂರು; ಒಂದು ಶಾಲೆ (School)ಯಲ್ಲಿ ಒಂದೋ ಎರಡೋ ಅವಳಿ ಜವಳಿ( Twins) ಜೋಡಿಗಳು ಕಂಡು ಬರೋದು ಸಾಮಾನ್ಯ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwala) ತಾಲೂಕಿನ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಇವೆಲ್ಲದ್ದಕ್ಕಿಂತ ಭಿನ್ನ. ಈ ಶಾಲೆಯಲ್ಲಿ ಒಂದೇ ಕ್ಲಾಸಿನಲ್ಲಿ 5 ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಓದುತ್ತಿದ್ದು ಅಚ್ಚರಿ ಮೂಡಿಸಿದೆ.

ಈ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಅಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನ್ಹವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ, ದುಲೈಕತ್ ರುಫಿದಾ- ಹಲೀಮತ್ ರಾಫಿದ ಎಂಬ 8 ಜೋಡಿ ಅವಳಿ ಜವಳಿಗಳು ಜೊತೆಯಾಗಿ ಓದುತ್ತಿವೆ. ಇವರಲ್ಲಿ ಒಂದು ಜೋಡಿ ಹಿಂದೂ ಸಮುದಾಯಕ್ಕೆ ಸೇರಿದರೆ,  ಉಳಿದಂತೆ ನಾಲ್ಕು ಜೋಡಿ ಮಕ್ಕಳು ಮುಸ್ಲಿಂ ಸಮುದಾಯದಕ್ಕೆ ಸೇರಿವೆ.

ಅವಳಿ ಜವಳಿ ಮಕ್ಕಳು ಹೆಚ್ಚಾಗಿ ರೂಪದಲ್ಲಿ ಮತ್ತು ಚಟುವಟಿಕೆಯಲ್ಲಿ ಒಂದೇ ಸಮನಾಗಿರುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಲವೊಮ್ಮೆ ಕನ್ಫ್ಯೂಶನ್ ಆಗುವ ಸಂದರ್ಭಗಳು ಎದುರಾಗುತ್ತವೆಯಂತೆ. ಆದರೂ ಇವರೆಲ್ಲರನ್ನು ಒಂದೇ ತರಗತಿಯಲ್ಲಿ ನೋಡೋದು ಖುಷಿ ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಸಹೋದರಿಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

Leave A Reply

Your email address will not be published.