Madyapradesh: ಉಜ್ಜಯಿನಿ ಅತ್ಯಾಚಾರ: ಆರೋಪಿಯ ಮನೆ ಕೆಡವಲು ಸರ್ಕಾರ ನಿರ್ಧಾರ

House Of Man Accused Of Raping Teen Near Ujjain To Be Demolished

Madhyapradesh; ಭೋಪಾಲ್: ಮಧ್ಯಪ್ರದೇಶ(Madyapradesh)ಉಜ್ಜಯಿನಿ (Ujjaini)ಯಲ್ಲಿ ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಮನೆಯನ್ನು ಕೆಡವಲು ನಿರ್ಧರಿಸಲಾಗಿದೆ. ಆ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಇದನ್ನು ಇಂದು ನೆಲಸಮ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ವಾರದ ಕೆಳಗೆ ಉಜ್ಜಯಿನಿಯ 15 ವರ್ಷದ ಬಾಲಕಿಯೊಬ್ಬಳನ್ನು ರೇಪ್ ಮಾಡಿ ದಾರಿಮಧ್ಯೆ ಬಿಟ್ಟು ಹೋಗಲಾಗಿತ್ತು. ಆಕೆ ಅರೆಬೆತ್ತಲೆಯಾಗಿ ಮತ್ತು ರಕ್ತಸ್ರಾವದಿಂದ ಸಹಾಯಕ್ಕಾಗಿ ಮನೆ-ಮನೆಗೆ ತೆರಳಿ ನೆರವು ಯಾಚಿಸಿದರೂ ಯಾರೂ ನೆರವಿಗೆ ಬಂದಿರಲಿಲ್ಲ. ಸಮೀಪದ ಆಶ್ರಮದ ಸಿಬ್ಬಂದಿಯೊಬ್ಬರು ಮಗುವಿನ ಸ್ಥಿತಿಕಂಡು ತಾವು ಧರಿಸಿದ್ದ ಟವಲ್ ನಿಂದ ಆಕೆಯನ್ನು ಮುಚ್ಚಿಕೊಂಡು ಆಸ್ಪತ್ರೆ(Hospital)ಗೆ ದೌಡಾಯಿಸಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಈ ಕುರಿತ ವೀಡಿಯೊ (Video)ಗಳು ದೇಶಾದ್ಯಂತ ಪಸರಿಸಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಭರತ್ ಸೋನಿ ಎಂಬ ಆಟೋ ರಿಕ್ಷಾ ಚಾಲಕನನ್ನು ಗುರುವಾರ ಬಂಧಿಸಲಾಗಿದೆ. ಸದ್ಯ ಭರತ್ ಜೈಲಿನಲ್ಲಿದ್ದಾನೆ.

ಆರೋಪಿ ಮನೆ ಕೆಡವಲು ಸರ್ಕಾರ ನಿರ್ಧಾರ
ಇತ್ತ ಆರೋಪಿ ಕುಟುಂಬವು ಸರ್ಕಾರಿ ಭೂಮಿಯಲ್ಲಿರುವ ಮನೆಯಲ್ಲಿ ವರ್ಷಗಳಿಂದ ವಾಸಿಸುತ್ತಿದೆ ಎಂದು ಉಜ್ಜಯಿನಿ ಮಹಾನಗರ ಪಾಲಿಕೆ ತಿಳಿಸಿದ್ದು, ನಾಳೆ ಈ ಮನೆ ಕೆಡವಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ ಆಯುಕ್ತ ರೋಷನ್ ಸಿಂಗ್, ‘ಈ ಜಮೀನು ಸರ್ಕಾರಕ್ಕೆ ಸೇರಿದ್ದು, ಆದ್ದರಿಂದ ಅದನ್ನು ಕೆಡವಲು ಯಾವುದೇ ಸೂಚನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮಧ್ಯಪ್ರದೇಶ ಪೊಲೀಸರ ಸಹಯೋಗದಲ್ಲಿ ಮುನ್ಸಿಪಲ್ ತಂಡ ಈ ಬಗ್ಗೆ ಇಂದು ಉಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

ಸುಮಾರು 700 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸುದೀರ್ಘ ತನಿಖೆಯ ನಂತರ ಭರತ್ ಸಿಕ್ಕಿಬಿದ್ದಿದ್ದಾನೆ. ತನಿಖೆಯಲ್ಲಿ ಒಟ್ಟು 30-35 ಜನರು ಭಾಗಿಯಾಗಿದ್ದರು. ಮೂರ್ನಾಲ್ಕು ದಿನ ಯಾರೂ ನಿದ್ದೆ ಮಾಡಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ವರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಸಹೋದರಿಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

 

Leave A Reply

Your email address will not be published.