comedy kiladi nayana: ನಿಮಗೆ ಒಂದು ಚೂರು ಮಾನ ಮರ್ಯಾದೆ ನಾಚಿಕೆ ಅನ್ನೋದು ಇದ್ರೆ ಈ ಥರಾ ಮಾಡ್ಬೇಡಿ; ತುಂಬು ಗರ್ಭಿಣಿ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಇಷ್ಟೊಂದು ಗರಂ ಆಗಿದ್ದು ಯಾಕೆ?

The comedy kiladi nayana got angry over fake news

comedy kiladi nayana: ಬೆಂಗಳೂರು; ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ(comedy kiladi Nayana) ಇದೀಗ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ತುಂಬು ಗರ್ಭಿಣಿ(Pregnant)ಯಾಗಿರುವ ನಯನಾ ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಮಗು ಆಗಮಿಸುವ ಖುಷಿಯಲ್ಲಿರಬೇಕಾದ ನಯನ ಇದೀಗ ಫುಲ್ ಗರಂ ಆಗಿದ್ದಾರೆ. ಅಷ್ಟಕ್ಕೂ ನಯನಾ ಕೋಪಕ್ಕೆ ಕಾರಣ ಅವರ ಬಗ್ಗೆ ಬಂದಿರುವ ಕೆಲವು ಫೇಕ್ ನ್ಯೂಸ್ ಗಳು.

ಹೌದು… ನಯನಾ ಫೇಕ್ ನ್ಯೂಸ್ ವಿರುದ್ಧ ಗರಂ ಆಗಿದ್ದಾರೆ.  ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಯನಾ, ಅವರಿಗೆ ಡಿಲಿವರಿ ಆಗಿ ಅವರಿಗೆ ಗಂಡು ಮಗು ಆಗಿದೆ, ಅವಳಿ-ಜವಳಿ ಮಕ್ಕಳಾಗಿವೆ ಅಂತಾ ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೇ ಆಕೆಯ ಆಕ್ರೋಶಕ್ಕೆ ಕಾರಣವಾಗಿದೆ.

https://www.instagram.com/reel/Cx5O2HaxaHJ/?igshid=NzZhOTFlYzFmZQ==

ಇಂತಹ ಫೇಕ್ ನ್ಯೂಸ್ ವಿರುದ್ಧ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ವಿಡಿಯೋವೊಂದನ್ನು ಹಂಚಿಕೊಂಡಿರುವ ನಯನಾ, ದಯವಿಟ್ಟು ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ಈ ರೀತಿ ಫೇಕ್ ನ್ಯೂಸ್ ಹಾಕಬೇಡಿ’ ಮಗು ಆದ ಮೇಲೆ ನನ್ನ ಪ್ರೀತಿಯ ಕನ್ನಡದ ಜನತೆಗೆ ನಾನು ತಿಳಿಸುತ್ತೀನಿ ನಾನೇ ಪೋಸ್ಟ್ ಮಾಡ್ತೀನಿ ಅಂತಾ ಹೇಳಿದ್ದಾರೆ. ಒಂದು ಚೂರು ಮಾನ ಮರ್ಯಾದೆ ನಾಚಿಕೆ ಅನ್ನೋದು ಇದ್ದರೆ ಅಂತಹ ನ್ಯೂಸ್ ಡಿಲೀಟ್ ಮಾಡಬೇಕು ಎಂದು ಮನವಿ ಮಾಡಿರುವ ನಯನಾ, ಫೇಕ್ ನ್ಯೂಸ್ನ ಯಾರೂ ನಂಬುವುದಕ್ಕೆ ಹೋಗಬೇಡಿ ಎಂದಿದ್ದಾರೆ.

ಇದನ್ನೂ ಓದಿ: ಸಂಬಂಧಿಕ ಅಂತಾ ಆ ಮನೆಗೆ ಆಗಾಗ್ಗೆ ಬರ್ತಿದ್ದ ಸುಂದರ ಯುವಕ ನಮ್ ಅವ್ನೆ ಅಂತಾ ಮನೆಗೆ ಬಿಟ್ಟಿದ್ದಕ್ಕೆ ಏನ್ ಮಾಡಿದ ನೋಡಿ.

Leave A Reply

Your email address will not be published.