ಸುಳ್ಯ: ಬೆಳ್ಳಂಬೆಳಗ್ಗೆ ನ.ಪಂ ಕಾರ್ಯಾಚರಣೆ | ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರ್ ಗಳ ತೆರವು, ಸೌಜನ್ಯಾ ಹೋರಾಟ ಹತ್ತಿಕ್ಕಲು ಯತ್ನ ?!

The soujanya protest banners have been removed in Sullia

Sullia : ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಫೀಲ್ಡ್ ಗಿಳಿದಿದ್ದು, ನಗರದ ಅಲ್ಲಲ್ಲಿ ಅಳವಡಿಸಲಾಗಿದ್ದ ಸೌಜನ್ಯ(Soujnaya) ಳ ಪರ ಬ್ಯಾನರ್ ಗಳನ್ನು ತೆರವುಗೊಳಿಸುತ್ತಿದ್ದಾರೆ.

ಇಂದು ಸುಳ್ಯದಲ್ಲಿ ನಡೆಯಲಿರುವ ಗಾಂಧಿ ಸ್ಮೃತಿ(Gandhi Smriti), ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ(Dharmastala)  ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ(veerendra Hegde) ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಸೌಜನ್ಯಳ ನ್ಯಾಯಕ್ಕಾಗಿ ಒತ್ತಾಯಿಸಿ‌ ನಗರದ ಅಲ್ಲಲ್ಲಿ ಬ್ಯಾನರ್(Banner) ಹಾಕಿದ್ದು, ಇದಕ್ಕೆ ನ.ಪಂ‌ ಅನುಮತಿ ಪಡೆದುಕೊಂಡಿದ್ದರೂ ಬ್ಯಾನರ್ ತೆರವು ಆಗುತ್ತಿದೆ.

ನಗರದ ಎಷ್ಟೋ ಕಡೆ ಬ್ಯಾನರ್ ಹಾಕಲು ಪರ್ಮಿಷನ್ ಪಡೆದಿದ್ದರೂ, ಈಗ ಬ್ಯಾನರ್ ತೆರವು ಮಾಡಲಾಗಿದೆ ಎಂದು ಬ್ಯಾನರ್ ಹಾಕಿದವರು ದೂರುತ್ತಿದ್ದಾರೆ. ನಾವು ಪರ್ಮಿಷನ್ ತೆಗೆದುಕೊಂಡು ಬ್ಯಾನರ್ ಹಾಕಿದ್ರೂ ಯಾಕೆ ನಮ್ಮ ಬ್ಯಾನರ್ ತೆಗೆಯಬೇಕು ? ಎಂದು ಕೆಲ ಆಯೋಜಕರು ದೂರಿದ್ದಾರೆ ಇದು ಸೌಜನ್ಯಾ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎನ್ನಲಾಗುತ್ತಿದೆ.

Leave A Reply

Your email address will not be published.