Lucknow: 20 ನಿಮಿಷ ಲಿಫ್ಟ್ ನಲ್ಲಿ ಸಿಲುಕಿಕೊಂಡ 5 ವರ್ಷದ ಬಾಲಕಿ; ಮುಂದೇನಾಯ್ತು?

5 year old girl gets trapped in elevator of apartment in Lucknow

Lucknow;  5 ವರ್ಷದ ಪುಟ್ಟ ಬಾಲಕಿ(girl)ಯೊಬ್ಬಳು ಸುಮಾರು 20 ನಿಮಿಷಗಳ ಕಾಲ ಅಪಾರ್ಟ್‌ಮೆಂಟ್‌ನ (Apartment) ಲಿಫ್ಟ್‌(Lift)ನಲ್ಲಿ ಸಿಲುಕಿಕೊಂಡ ಘಟನೆ ಉತ್ತರ ಪ್ರದೇಶ(Uttar Pradesh)ದ ಲಕ್ನೋದಲ್ಲಿ ನಡೆದಿದೆ.

ಲಕ್ನೋದಲ್ಲಿ(Lucknow) ಅಪಾರ್ಟ್‌ಮೆಂಟ್‌ನ ಲಿಫ್ಟ್ ನಲ್ಲಿ. 5 ವರ್ಷದ ಬಾಲಕಿ 20 ನಿಮಿಷಗಳ ಕಾಲ ಸಿಲುಕಿ ಹಾಕಿಕೊಂಡಿದ್ದಾಳೆ. ಇಡೀ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ (viral) ಆಗಿದೆ. 2-ನಿಮಿಷದ 13 ಸೆಕೆಂಡ್‌ಗಳ ವೀಡಿಯೊ ಕ್ಲಿಪ್‌ನಲ್ಲಿ ಪುಟ್ಟ ಹುಡುಗಿ ಸುಮಾರು 20 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿರುವುದನ್ನು ತೋರಿಸುತ್ತದೆ. ನಿಯಾನ್ ಹಸಿರು ಸಮವಸ್ತ್ರವನ್ನು ಧರಿಸಿರುವ ಅಪ್ರಾಪ್ತ ಬಾಲಕಿ, ಲಿಫ್ಟ್‌ನ ಬಾಗಿಲು ಬಡಿಯುತ್ತಿರುವಾಗ ಕಿರುಚುತ್ತಾ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು.

https://twitter.com/Arv_Ind_Chauhan/status/1709540680773910699

ಅಪ್ರಾಪ್ತ ಬಾಲಕಿಯು ಲಿಫ್ಟ್‌ನೊಳಗಿನ ಕ್ಯಾಮೆರಾದತ್ತ ತಿರುಗಿ ಬಾಗಿಲು ತೆರೆಯಲು ಮತ್ತೊಮ್ಮೆ ಪ್ರಯತ್ನಿಸುತ್ತಿರುವಾಗ ತನ್ನನ್ನು ಹೊರಗೆ ತರುವಂತೆ ಮನವಿ ಮಾಡುವುದನ್ನು ವೀಡಿಯೊ ಕಾಣಬಹುದಾಗಿದೆ. ಕೊನೆಗೆ, ಸುಮಾರು 20 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಬಾಲಕಿಯನ್ನು ರಕ್ಷಿಸಲಾಯಿತು.

ಇದನ್ನೂ ಓದಿ: ದಕ್ಷಿಣಕನ್ನಡ; ಕಡಬದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಬಿಸಿರೋಡ್ ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಚಿಕಿತ್ಸೆ ಫಲಿಸದೇ ಸಾವು

Leave A Reply

Your email address will not be published.