ರಾತ್ರೋ ರಾತ್ರಿ ಕಳವಾದ ಬಸ್ ಸ್ಟ್ಯಾಂಡ್ : 10 ಲಕ್ಷ ವೆಚ್ಚದಲ್ಲಿ ಕಟ್ಟಿದ ಬಸ್ ಸ್ಟ್ಯಾಂಡ್ 4 ನೇ ದಿನದಲ್ಲಿ ನಾಪತ್ತೆ !

busstand missing in banglore

ಬೆಂಗಳೂರಿನಲ್ಲಿ ಬಸ್ ಸ್ಟ್ಯಾಂಡ್ (Bus stand) ಕಳವಾಗಿದೆ. ಕೇವಲ ಕೆಲವೇ ತಿಂಗಳ ಹಿಂದಷ್ಟೇ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಲಾಗಿದ್ದ ಬಸ್ ಸ್ಟ್ಯಾಂಡ್’ನ್ನು ಕಳವು ಮಾಡಿರುವ ಘಟನೆ ಬೆಂಗಳೂರಿನಲ್ಲಿ (Benagluru) ನಡೆದಿದೆ.

ಹೌದು, ಬೆಂಗಳೂರಿನ ವಿಧಾನಸೌಧದ ಪಕ್ಕದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ (Cunningham Road) ಇದ್ದ ಬಸ್ ಸ್ಟ್ಯಾಂಡ್ ರಾತ್ರೋರಾತ್ರಿ ಸಡನ್ ಗಾಯಬ್. ಬಿಬಿಎಂಪಿಯಿಂದ ಕಳೆದ ಆಗಸ್ಟ್ ತಿಂಗಳಿನಲ್ಲಿ ನಿರ್ಮಾಣವಾಗಿದ್ದ ಬಸ್ ಸ್ಟ್ಯಾಂಡ್ ಕಟ್ಟಿದ ಒಂದೇ ವಾರದಲ್ಲಿ ಬಿಚ್ಚಿಕೊಂಡು ಹೋಗಿದ್ದಾರೆ. ಈ ಬಸ್ ಸ್ಟ್ಯಾಂಡ್ ಕಳುವಿನ ಬಗ್ಗೆ ಕೇವಲ ಕೆಲ ದಿನಗಳ ಹಿಂದೆ ಹೈಗ್ರೌಂಡ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ.

ಜಾಸ್ತಿ ಜನ ಸಂದಣಿ ಬರುವ ಈ ಬಸ್ ಸ್ಟ್ಯಾಂಡ್ ನಲ್ಲಿ ಹೆಚ್ಚು ಪ್ರಯಾಣಿಕರಿರುವ ಕಾರಣಕ್ಕೆ 2 ಬಸ್ ಸ್ಟ್ಯಾಂಡ್ಗಳನ್ನು ಕನ್ನಿಂಗ್ ಹ್ಯಾಂ ರಸ್ತೆಯ ಬಳಿ ನಿರ್ಮಿಸಲಾಗಿತ್ತು. ಆದರೆ ಅದರಲ್ಲಿ ಒಂದು ಬಸ್ ಸ್ಟ್ಯಾಂಡ್ ನಿರ್ಮಾಣವಾದ 4 ದಿನದಲ್ಲೇ ಬಸ್ ಸ್ಟ್ಯಾಂಡ್ ಮಂಗ ಮಾಯ ಆಗಿದೆ. ಇದೀಗ ಈ ಬಗ್ಗೆ ಸ್ಥಳೀಯರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave A Reply

Your email address will not be published.