ಹಾಸನ- ಗ್ರಾಮದ ಹೊರ ವಲಯದಲ್ಲಿ ಪತ್ತೆಯಾಯ್ತು ಸ್ವಾಮೀಜಿಗಳು ಧರಿಸುವ ಒಂದಲ್ಲ ಎರಡಲ್ಲ ಬರೋಬ್ಬರಿ 12 ಜೊತೆ; ಆತಂಕಗೊಂಡ ಗ್ರಾಮಸ್ಥರು.

Hassan- 12 pairs of sandals worn by Swamijis were found in the outskirts of the village.

Hassan; ಹಾಸನ; ಅರಸೀಕೆರೆ(arsikere) ತಾಲೂಕಿನ ಹೊನ್ನಶೆಟ್ಟಿಹಳ್ಳಿ (Honnashettyhalli) ಬಳಿ ಗ್ರಾಮದ ಹೊರ ವಲಯದಲ್ಲಿ ಬರೋಬ್ಬರಿ  12 ಜೊತೆ ಪಾದುಕೆಗಳು ಹಾಗೂ ದಂಡ ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

https://youtu.be/M0z7OrDaWco?si=EaYpU1HHXxWI1pMJ

ವಿಶಾಲ‌ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ ಪಾದುಕೆ ಹಾಗು ದಂಡ ‌ಜೋಡಿಸಿ ಇಡಲಾಗಿದೆ. ಸನ್ಯಾಸಿ(Monk)ಗಳು ಬಳಸೋ ವಸ್ತುಗಳನ್ನ ಕಂಡು ಜನರು ಆತಂಕಗೊಂಡಿದ್ದಾರೆ. ರಾತ್ರೋ ರಾತ್ರಿ ಗ್ರಾಮದ ಸಮೀಪ 12 ಜೊತೆ ಪಾದುಕೆ ಹಾಗು 28 ದಂಡ ಪ್ರತ್ಯಕ್ಷವಾಗಿದ್ದು ಹೇಗೆ ಅನ್ನೋ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.

ಯಾರಾದ್ರು ಸ್ವಾಮಿಗಳ ತಂಡ‌ ಬಂದು ಬಿಟ್ಟು ಹೋಗಿದ್ದಾರೋ ಅಥವಾ ಏನಾದ್ರು ಪೂಜೆಗಾಗಿ ಹೀಗೆ ಮಾಡಲಾಗಿದೆಯೊ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಅರಸೀಕೆರೆ ಗ್ರಾಮಾಂತರ ಪೊಲೀಸ್(Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.