Udupi; ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

missing-man-found-dead-in-karkala

Udupi; ಉಡುಪಿ; ಐದು ದಿನಗಳ ಹಿಂದೆ ನಾಪತ್ತೆ(Missing)ಯಾಗಿದ್ದ ವ್ಯಕ್ತಿ ಶವ(Dead body) ವಾಗಿ ಪತ್ತೆಯಾಗಿರುವ ಘಟನೆ ಕಾರ್ಕಳ(Karkala)ದಲ್ಲಿ ನಡೆದಿದೆ.

ಐದು ದಿನಗಳ ಹಿಂದೆ ನಾಪತ್ತೆಯಾದ ಕಾರ್ಕಳದ ದುರ್ಗ ಗ್ರಾಮದ ನಿವಾಸಿ ಸಂದೇಶ್ ಶೆಟ್ಟಿ ಎಂಬವರು ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಕಾರ್ಕಳ ಪುರಸಭಾ ವ್ಯಾಪ್ತಿಯ ಕಾವೇರಡ್ಕ ಅಯೋಧ್ಯಾ ನಗರ ದುರ್ಗ ತೆಳ್ಳಾರು ಸಂಪರ್ಕ ಸೇತುವೆ(Bridge) ಯಡಿ ಪತ್ತೆಯಾಗಿದೆ(Udupi news).

ಸಂದೇಶ್ ಶೆಟ್ಟಿಯವರು ನಾಪತ್ತೆಯಾದ ದಿನವೇ ಅವರು ದುರ್ಗ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿತ್ತು. ಭಾರೀ ಮಳೆಯ ಹಿನ್ನೆಲೆಯಲ್ಲಿ ಅವರ ಶವ ತೇಲಿಕೊಂಡು ಬಂದು ಕಾವೇರಡ್ಕ ಎಂಬಲ್ಲಿನ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದೆ.

ಇದನ್ನು ಗಮನಿಸಿದ ಸ್ಥಳೀಯರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮಂಗಳೂರು; ವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಶ್ರೀಮಂತ ಕಳ್ಳರಿಬ್ಬರ ಬಂಧನ

 

Leave A Reply

Your email address will not be published.