Halashri: ಅಭಿನವ ಹಾಲಶ್ರೀ ವಿರುದ್ಧ ಮತ್ತೊಂದು ಪ್ರಕರಣ ದಾಖಲು; ಸ್ವಾಮೀಜಿಯನ್ನು ಕರೆದುಕೊಂಡು ಹೋಗಿ ಪೊಲೀಸರಿಂದ ಸ್ಥಳ ಮಹಜರು

one more complaint registred against halashri

Halashri; ಗದಗ : ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ  ಪರಪ್ಪನ ಅಗ್ರಹಾರದಲ್ಲಿರುವ ಅಭಿನವ ಹಾಲಶ್ರೀ(Abhinava Halashri)  ವಿರುದ್ಧ ಗದಗ್ ನಲ್ಲಿ ಮತ್ತೊಂದು ವಂಚನೆ ಕೇಸ್ ದಾಖಲಾಗಿತ್ತು.ಇದೀಗ ಮುಂಡರಗಿ ಪೊಲೀಸರು ಬಾಡಿ ವಾರೆಂಟ್ (Body Warrant)ಮೇಲೆ ಅಭಿನವ ಹಾಲಶ್ರೀಗಳನ್ನು ಹೊರ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿ ಪುನಃ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ(Banglore Central Jail) ಶಿಫ್ಟ್ ಮಾಡಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ(Shirahatti) ಮತಕ್ಷೇತ್ರ ಶಾಸಕ ಆಗಬೇಕು ಎಂದು ಟಿಕೆಟ್‌ಗಾಗಿ ಪೈಪೊಟಿ ನಡೆಸುತ್ತಿದ್ದ PDO ಸಂಜಯ್ ಚವಡಾಳಗೆ ಹಾಲಶ್ರೀ  ಟಿಕೆಟ್ ಕೊಡಿಸೋದಾಗಿ ಒಂದು ಕೋಟಿ ರೂ. ಪಡೆದಿದ್ದರಂತೆ. ಹೀಗಾಗಿ ಸಂಜಯ್ ಚವಡಾಳ ಸೆಪ್ಟೆಂಬರ್ 25ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ದೂರುದಾರ ಪಿಡಿಓ ಸಂಜಯ್ ಚವಡಾಳ ಮನೆಗೆ ಹಾಲಶ್ರೀ ಸ್ವಾಮೀಜಿಯನ್ನು ಕರೆದುಕೊಂಡು ಮುಂಡರಗಿ ಪೊಲೀಸರು ಹೋಗಿದ್ರು. ಆದ್ರೆ, ದೂರುದಾರ ಸಂಜಯ್ ಚವಡಾಳ ಮನೆಯಲ್ಲಿ ಇಲ್ಲದ ಕಾರಣ ಪೊಲೀಸ್ರು ಸ್ಥಳ ಮಹಜರು ಮಾಡದೇ ವಾಪಸ್ಸಾಗಿದ್ದಾರೆ.ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಹಾಲಶ್ರೀ ಮಠಕ್ಕೆ ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮುಂಡರಗಿ ಪಟ್ಟಣದ ಹಣಕಾಸಿನ ವ್ಯವಹಾರ ನಡೆದ ವಿವಿಧ ಸ್ಥಳಗಳಲ್ಲೂ ಸ್ಥಳ ಮಹಜರು ಮಾಡಲಾಗಿದೆ.

ಸ್ಥಳ ಮಹಜರು ಹಾಗೂ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಗದಗ ಜಿಲ್ಲೆಯ‌ ಮುಂಡರಗಿ ಪೊಲೀಸರು ವಾಪಸ್ ಬೆಂಗಳೂರು ಕೇಂದ್ರ ಕಾರಗೃಹಕ್ಕೆ ಶಿಫ್ಟ್ ಮಾಡಿದ್ದಾರೆ. ಅಕ್ಟೊಬರ್ 3 ಮತ್ತು 4 ಎರಡು‌ ದಿನ ತೀವ್ರ ವಿಚಾರಣೆ ಮಾಡಿದ‌ ಪೊಲೀಸರು, ನಿನ್ನೆ ರಾತ್ರಿಯೇ ಬೆಂಗಳೂರ ಜೈಲಿಗೆ ಶಿಫ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತಾಯಿ ಸೋನಿಯಾಗಾಂಧಿಗೆ ಸಪ್ರೈಸ್ ಗಿಫ್ಟ್ ನೀಡಿದ ರಾಹುಲ್ ಗಾಂಧಿ ಉಡುಗೊರೆ ನೋಡಿ ಸೋನಿಯಾಗಾಂಧಿ ಫುಲ್ ಖುಷ್…

 

 

Leave A Reply

Your email address will not be published.