Rahul Gandhi: ತಾಯಿ ಸೋನಿಯಾಗಾಂಧಿಗೆ ಸಪ್ರೈಸ್ ಗಿಫ್ಟ್ ನೀಡಿದ ರಾಹುಲ್ ಗಾಂಧಿ; ಉಡುಗೊರೆ ನೋಡಿ ಸೋನಿಯಾಗಾಂಧಿ ಫುಲ್ ಖುಷ್…

rahul-gandhis-surprise-gift-for-mother-sonia-gandhi

New Delh; ನವದೆಹಲಿ: ತಮ್ಮ ಬ್ಯುಸಿ ಕೆಲಸಗಳ ಮಧ್ಯೆಯೂ ಕಾಂಗ್ರೆಸ್(Congress) ನಾಯಕ ರಾಹುಲ್ ಗಾಂಧಿ(Rahul Gandhi) ತಮ್ಮ ತಾಯಿಗಾಗಿ ಸಮಯ ಕೊಡೋದನ್ನು ಮರಯೋದಿಲ್ಲ. ಇದೀಗ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ(Sonia Gandhi) ಅವರಿಗೆ ಬಿಗ್ ಸಪ್ರೈಸ್(Surprise) ಒಂದನ್ನು ನೀಡಿದ್ದಾರೆ.

ರಾಹುಲ್  ಯೂಟ್ಯೂಬ್( Youtube) ಚಾನೆಲ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರಾಹುಲ್ ಗಾಂಧಿ ತಮ್ಮ ಇತ್ತೀಚಿನ ಗೋವಾ(Goa) ಪ್ರವಾಸದ ಬಗ್ಗೆ ಹಂಚಿಕೊಂಡಿದ್ದಾರೆ. ಇನ್ನು ಗೋವಾದಲ್ಲಿ ಕುಟುಂಬವೊಂದನ್ನು ಭೇಟಿಯಾಗಿದ್ದು, ಅವರಿಂದ ನಾಯಿ ಮರಿ(Puppy)ಯನ್ನ ಖರೀದಿಸಿದ್ದಾರೆ. ಸದ್ಯ ಅದನ್ನ ನವದೆಹಲಿಯ ಮನೆಗೆ ಕರೆತಂದು ಸೋನಿಯಾ ಗಾಂಧಿಗೆ ಉಡುಗೊರೆ(Gift)ಯಾಗಿ ನೀಡಿದ್ದಾರೆ.

ವಿಶ್ವ ಪ್ರಾಣಿ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ ಹೊಸ ಕುಟುಂಬ ಸದಸ್ಯರನ್ನ ಸಾಮಾಜಿಕ ಮಾಧ್ಯಮಕ್ಕೆ ಪರಿಚಯಿಸಿದ್ದಾರೆ. ಆಕೆಯ ಹೆಸರು ನೂರಿ ಮತ್ತು ಇದು ಗೋವಾದಿಂದ ವಿಮಾನದಲ್ಲಿ ಬಂದ ಅವರ ತಾಯಿ ಸೋನಿಯಾ ಗಾಂಧಿಗೆ ಉಡುಗೊರೆಯಾಗಿದೆ ಎಂದಿದ್ದಾರೆ.

ಗೋವಾ ಮೂಲದ ಶ್ವಾನ ಸಾಕಣೆದಾರರಾದ ಶರ್ವಾನಿ ಪಿಟ್ರೆ ಮತ್ತು ಪತಿ ಸ್ಟಾನ್ಲಿ ಬ್ರಾಗಾಂಕಾ ಅವರನ್ನ ರಾಹುಲ್ ಗಾಂಧಿ ಖಾಸಗಿ ಭೇಟಿ ಮಾಡಿದ್ದರು. ಜ್ಯಾಕ್ ರಸೆಲ್ ಟೆರಿಯರ್ ಗಳ ಲಭ್ಯತೆಯ ಬಗ್ಗೆ ವಿಚಾರಿಸಲು ರಾಹುಲ್ ಗಾಂಧಿ ಅವರ ಕಚೇರಿಯಿಂದ ಕರೆ ಬಂದಿದೆ ಎಂದು ಅವರು ಈ ಹಿಂದೆ ತಿಳಿಸಿದ್ದರು.

ನಂತರ ರಾಹುಲ್ ಗಾಂಧಿ ಮನೆಗೆ ತಲುಪುತ್ತಿದ್ದಂತೆ, ನೂರಿಯನ್ನ ಹೊರಗೆ ಕರೆದೊಯ್ದು ರಾಹುಲ್, ತಮ್ಮ ತಾಯಿ ಸೋನಿಯಾ ಗಾಂಧಿ ಅವರಿಗೆ ಉಡುಗೊರೆ ನೋಡುವಂತೆ ಹೇಳಿದರು. ಆರಂಭದಲ್ಲಿ ಹಿಂಜರಿದ ಸೋನಿಯಾ ಗಾಂಧಿ ನಂತರ ಹೊರಬಂದು, ಉಡುಗೊರೆ ನೋಡಿ, ಖುಷಿಯಿಂದ ನಾಯಿಮರಿಯನ್ನ ಎತ್ತಿಕೊಂಡರು. ನಂತ್ರ “ತುಂಬಾ ಮುದ್ದಾಗಿದ್ದಾಳೆ” ಎಂದ ಸೋನಿಯಾ ಗಾಂಧಿ, ಉಡುಗೊರೆ ನೀಡಿದ ಮಗನಿಗೆ ಧನ್ಯವಾದ ತಿಳಿಸಿದ್ರು.

ಇದನ್ನೂ ಓದಿ:Miracle; 36 ಗಂಟೆಗಳ ಕಾಲ ಸಮುದ್ರದಲ್ಲಿದ್ದರೂ ಬದುಕಿ ಬಂದ ಬಾಲಕ ಹುಡುಗನ ಜೀವ ಉಳಿದದ್ದು ಹೇಗೆ?

Leave A Reply

Your email address will not be published.